Select Location
All Locations
State
Region
City / District
Operation Sindoora anniversary: ಭಾರತೀಯ ಸೇನೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದೇಕೆ? ಪಾಕ್ ಸೇನಾ ವಕ್ತಾರನ ಈ ಪ್ರಶ್ನೆ ಫುಲ್ ಟ್ರೋಲ್!

Operation Sindoora anniversary: ಭಾರತೀಯ ಸೇನೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದೇಕೆ? ಪಾಕ್ ಸೇನಾ ವಕ್ತಾರನ ಈ ಪ್ರಶ್ನೆ ಫುಲ್ ಟ್ರೋಲ್!

ಇಸ್ಲಾಮಾಬಾದ್‌ (ಮೇ.9): ಆಪರೇಷನ್‌ ಸಿಂದೂರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ಸೇನಾಧಿಕಾರಿಗಳು ಗುರುವಾರ ಜೈಪುರದಲ್ಲಿ ನಡೆಸಿದ ಮಾಧ್ಯಮ ಸಂವಾದದ ಬಗ್ಗೆ ಪಾಕಿಸ್ತಾನದ ಸೇನಾ ವಕ್ತಾರ ಲೆ.ಜ. ಅಹ್ಮದ್‌ ಷರೀಫ್‌ ಚೌಧರಿ ಕೇಳಿರುವ ಪ್ರಶ್ನೆಯೊಂದು ಭಾರೀ ವೈರಲ್‌ ಆಗುತ್ತಿದೆ. ‘ಅವರು ಇಂಗ್ಲಿಷ್‌ನಲ್ಲಿ ಯಾಕೆ ಮಾತಾಡಿದರು?’ ಎಂದು ಜ। ಷರೀಫ್‌ ಕೇಳಿದ್ದಾರೆ.

‘ನಿಮಗೆ ಇಂಗ್ಲಿಷ್‌ನಲ್ಲಿ ಮಾತಾಡುವಂತೆ ಯಾರು ಹೇಳಿದರು? ನೀವು ಹೇಳಬೇಕಿರುವುದನ್ನು ಇಡೀ ವಿಶ್ವಕ್ಕೆ ತಲುಪಿಸಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇ?’ ಎಂದು ಷರೀಫ್‌ ಪ್ರಶ್ನಿಸಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ ಆಗುತ್ತಿದೆ. ಪಹಲ್ಗಾಂ ದಾಳಿಯ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆಂಗ್ಲ ಭಾಷೆಯಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಈ ಮೂಲಕ, ಭಾರತವು ತನ್ನ ಮೇಲಿನ ದಾಳಿಗೆ ಪಾಕ್‌ ಬೆಲೆ ತೆರಬೇಕಾಗುವುದು ಎಂದು ಇಡೀ ವಿಶ್ವಕ್ಕೆ ಹೇಳಿದ್ದರು.


Asianet News 21 days ago
Home Flash News