Select Location
All Locations
State
Region
City / District
ಶಾಸಕರ ಕೊರತೆ, ಅಧಿಕಾರಕ್ಕೆ ವಿಜಯ್‌ ಮಹಾ ಪ್ಲ್ಯಾನ್‌! MGR ಹಾದಿಯಲ್ಲಿ ದಳಪತಿ? 108 ಅಲ್ಲ 107!

ಶಾಸಕರ ಕೊರತೆ, ಅಧಿಕಾರಕ್ಕೆ ವಿಜಯ್‌ ಮಹಾ ಪ್ಲ್ಯಾನ್‌! MGR ಹಾದಿಯಲ್ಲಿ ದಳಪತಿ? 108 ಅಲ್ಲ 107!

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ದಳಪತಿ ವಿಜಯ್ ಅವರ ಟಿವಿಕ್ ಪಕ್ಷಕ್ಕೆ ಸರ್ಕಾರ ರಚಿಸಲು ಇನ್ನೂ 11 ಶಾಸಕರ ಬೆಂಬಲ ಬೇಕಾಗಿದೆ. ಎಐಎಡಿಎಂಕೆ ಮೈತ್ರಿಯಿಂದ ಹಿಡಿದು ವಿಶ್ವಾಸಮತ ಯಾಚನೆವರೆಗಿನ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ.  ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್ ಹಿಂದೆಂದೂ ಕಾಣದ ಸಂಚಲನ ಸೃಷ್ಟಿಸಿದ್ದಾರೆ. ನಟನಾಗಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಅವರು, ರಾಜಕೀಯದಲ್ಲೂ ಅದೇ ವೇಗದಲ್ಲಿ ಮುನ್ನುಗ್ಗುತ್ತಿದ್ದಾರೆ. 2024ರಲ್ಲಿ ಸ್ಥಾಪನೆಯಾದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷ, ಕೇವಲ ಎರಡು ವರ್ಷಗಳಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳಿಗೆ ಇನ್ನೂ 11 ಶಾಸಕರ ಕೊರತೆ ಇರುವುದೇ ಸದ್ಯದ ರಾಜಕೀಯ ಚದುರಂಗದಾಟದ ಕೇಂದ್ರಬಿಂದುವಾಗಿದೆ.

ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆಗ ಟಿವಿಕೆ ಬಲ 107ಕ್ಕೆ ಇಳಿಯಲಿದೆ. ಹೀಗಾಗಿ ಹೆಚ್ಚುವರಿ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ರಾಜಕೀಯ ವಲಯಗಳ ಮಾಹಿತಿ ಪ್ರಕಾರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೆಲವು ಶಾಸಕರು ವಿಜಯ್‌ಗೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಈ ಬೆಂಬಲ ಸಿಕ್ಕರೆ ಟಿವಿಕೆ ಬಲ 112ಕ್ಕೆ ಏರಬಹುದು. ನಂತರ ಬೇಕಾದ ಸಂಖ್ಯೆ ತಲುಪಲು ಸಣ್ಣ ಪಕ್ಷಗಳ ಬೆಂಬಲ ನಿರ್ಣಾಯಕವಾಗಲಿದೆ.


Asianet News 53 minutes ago
Home Flash News