ರಾಮಾಯಣ ಸಿನಿಮಾ ನಂತರ ಬ್ರೇಕ್ ತಗೊಳ್ತೀನಿ: ಯಶ್ ನಿರ್ಧಾರಕ್ಕೆ ಕಾರಣವೇನು?
ರಾಮಾಯಣ ಸಿನಿಮಾದ ಬಳಿಕ ಒಂದಿಷ್ಟು ಕಾಲ ಬ್ರೇಕ್ ತೆಗೆದುಕೊಳ್ಳುವುದಾಗಿ ಯಶ್ ಹೇಳಿದ್ದಾರೆ. ಸದ್ಯ ಮುಂಬೈಯಲ್ಲಿ ‘ರಾಮಾಯಣ’ ಚಿತ್ರದಲ್ಲಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಅವರು, ‘ಏಕಕಾಲಕ್ಕೆ ಎರಡೆರಡು ದೈತ್ಯ ಸಿನಿಮಾಗಳನ್ನು ನಿರ್ವಹಿಸಿ ಬಳಲಿದ್ದೇನೆ. ಹೀಗಾಗಿ ಈ ಚಿತ್ರಗಳ ಬಳಿಕ ಸ್ವಲ್ಪ ದಿನಗಳ ಕಾಲ ವಿರಾಮ ಪಡೆದು ನಂತರ ಹೊಸ ಸಿನಿಮಾಗಳ ಬಗ್ಗೆ ಚಿಂತಿಸುವೆ ಎಂದಿದ್ದಾರೆ. 2022ರಲ್ಲಿ ಬಿಡುಗಡೆಯಾದ ಕೆಜಿಎಫ್ 2 ಸಿನಿಮಾವೇ ಕೊನೆ.
ಆ ಬಳಿಕ ಇಲ್ಲಿಯವರೆಗೆ ನನ್ನ ಯಾವ ಸಿನಿಮಾವೂ ಬಿಡುಗಡೆಯಾಗಿಲ್ಲ. ಇದಕ್ಕೆ ಅಭಿಮಾನಿಗಳಿಗೆ ನನ್ನ ಬಗ್ಗೆ ಸಿಟ್ಟಿದೆ ಅಂತ ತಿಳಿದಿದೆ. ಆದರೆ ಈ ದೈತ್ಯ ಸಿನಿಮಾಗಳಿಗೆ ಅಷ್ಟು ಪರಿಶ್ರಮ ಹಾಗೂ ಸಮಯದ ಅಗತ್ಯವಿತ್ತು. ಜೊತೆಗೆ ಎರಡೂ ಸಿನಿಮಾಗಳನ್ನೂ ಗ್ಲೋಬಲ್ ಲೆವೆಲ್‌ನಲ್ಲಿ ಬಿಡುಗಡೆ ಮಾಡುವ ಸವಾಲಿತ್ತು. ಕೆಜಿಎಫ್ 3 ಸಿನಿಮಾ ಮಾಡುವ ಬಗ್ಗೆ ಬ್ರೇಕ್‌ನ ಬಳಿಕ ಚಿಂತಿಸುವೆ. ಸದ್ಯ ಅದರ ಸ್ಕ್ರಿಪ್ಟ್ ಅಂತಿಮಗೊಳ್ಳಬೇಕಿದೆ ಎಂದೂ ಯಶ್ ಹೇಳಿದ್ದಾರೆ.