SSLC ಪರೀಕ್ಷೆಯಲ್ಲಿ ಸಾವಿರಾರು ಮಕ್ಕಳು ಕನ್ನಡದಲ್ಲೇ ಫೇಲ್! ತ್ರಿಭಾಷಾ ಸೂತ್ರಕ್ಕೆ 'ಕೊಕ್' ನೀಡಲು ಪ್ರಾಧಿಕಾರ ಶಿಫಾರಸು!
ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣದ ಅಡಿಪಾಯ ಎಂದೇ ಪರಿಗಣಿಸಲಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಯಿನುಡಿ ಕನ್ನಡದಲ್ಲೇ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವುದು ಈಗ ಆತಂಕಕ್ಕೆ ಕಾರಣವಾಗಿದೆ. 2025ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರೋಬ್ಬರಿ 85 ಸಾವಿರ ಮಕ್ಕಳು ಕನ್ನಡದಲ್ಲಿ ಫೇಲ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಮಗ್ರ ಅಧ್ಯಯನ ನಡೆಸಿ, ಫಲಿತಾಂಶ ಸುಧಾರಣೆಗೆ ಮಹತ್ವದ ಶಿಫಾರಸುಗಳನ್ನೊಳಗೊಂಡ ವರದಿಯನ್ನು ಶಿಕ್ಷಣ ಸಚಿವರಿಗೆ ಸಲ್ಲಿಸಿದೆ. ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಈ ಅಧ್ಯಯನ ವರದಿಯನ್ನು ಸಲ್ಲಿಸಿದ್ದು, ಕನ್ನಡ ಕಲಿಕೆಯನ್ನು ಸುಧಾರಿಸಲು ಕ್ರಾಂತಿಕಾರಿ ಬದಲಾವಣೆಗಳಿಗೆ ಸೂಚಿಸಿದ್ದಾರೆ.ತ್ರಿಭಾಷಾ ಸೂತ್ರಕ್ಕೆ ವಿದಾಯ - ದ್ವಿಭಾಷಾ ನೀತಿ ಜಾರಿ ವಿದ್ಯಾರ್ಥಿಗಳ ಮೇಲೆ ಭಾಷಾ ಕಲಿಕೆಯ ಅನಗತ್ಯ ಹೊರೆಯನ್ನು ತಗ್ಗಿಸಲು ಈಗಿರುವ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು, 'ದ್ವಿಭಾಷಾ ನೀತಿ'ಯನ್ನು ಜಾರಿಗೆ ತರಬೇಕು ಎಂದು ವರದಿ ಹೇಳಿದೆ.
ತ್ರಿಭಾಷಾ ಸೂತ್ರಕ್ಕೆ ವಿದಾಯ - ದ್ವಿಭಾಷಾ ನೀತಿ ಜಾರಿ ವಿದ್ಯಾರ್ಥಿಗಳ ಮೇಲೆ ಭಾಷಾ ಕಲಿಕೆಯ ಅನಗತ್ಯ ಹೊರೆಯನ್ನು ತಗ್ಗಿಸಲು ಈಗಿರುವ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು, 'ದ್ವಿಭಾಷಾ ನೀತಿ'ಯನ್ನು ಜಾರಿಗೆ ತರಬೇಕು ಎಂದು ವರದಿ ಹೇಳಿದೆ.
ಅಂಗನವಾಡಿಯಿಂದ ಪದವಿವರೆಗೆ ಕನ್ನಡ ಕಡ್ಡಾಯ ಕರ್ನಾಟಕದಲ್ಲಿ ಕನ್ನಡವೇ ರಾಜ್ಯ ಭಾಷೆಯಾಗಿರುವುದರಿಂದ ವಿದ್ಯಾರ್ಥಿ ಯಾವುದೇ ಮಾಧ್ಯಮದಲ್ಲಿ (English/Kannada/Others) ಓದುತ್ತಿದ್ದರೂ, ಅಂಗನವಾಡಿಯಿಂದ ಪದವಿ ಹಂತದವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಬೇಕು.
ಪಠ್ಯಪುಸ್ತಕವು ಕೇವಲ ವಿಷಯಗಳನ್ನು ತುರುಕುವ ಸಾಧನವಾಗಬಾರದು. ಅದರಲ್ಲಿ ಸರಳ ಕಥೆ, ಕವನ, ಸಂಭಾಷಣೆ ಮತ್ತು ಭಾಷಾ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವಿರಬೇಕು. ಮೌಲ್ಯಮಾಪನ ಮಾಡುವಾಗ ಕೇವಲ ವಿಷಯಕ್ಕೆ ಪ್ರಾಮುಖ್ಯತೆ ನೀಡದೆ, ಮಗುವಿನ ಭಾಷಾ ಕಲಿಕೆಯ ಸಾಮರ್ಥ್ಯವನ್ನು ಗಮನಿಸಬೇಕು.