Mann Ki Baat: 2 ತಿಂಗಳಲ್ಲಿ 2 ಬಾರಿ ಮೈಸೂರನ್ನು ಹೊಗಳಿದ ಮೋದಿ; ಪ್ರಧಾನಿಗಳಿಗೆ ಮೆಚ್ಚುಗೆಯಾಯ್ತು ಈ ಜನರ ಪರಿಸರ ಪ್ರಜ್ಞೆ!
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಇಂದು ಇಡೀ ದೇಶದ ಗಮನ ಸೆಳೆದಿದೆ! ಬುದ್ಧ ಪೂರ್ಣಿಮೆ ಅಂಗವಾಗಿ ಪ್ರಸಾರವಾದ 'ಮನ್ ಕೀ ಬಾತ್' (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೈಲುಕುಪ್ಪೆಯ ಕರ್ಮ ವಿಹಾರವನ್ನು ವಿಶೇಷವಾಗಿ ಉಲ್ಲೇಖಿಸಿ ಮೆಚ್ಚುಗೆ (Appreciation) ವ್ಯಕ್ತಪಡಿಸಿದ್ದಾರೆ.
ಬೈಲುಕುಪ್ಪೆ ಇತಿಹಾಸ; ಟಿಬೆಟ್‌ನಿಂದ ಕರ್ನಾಟಕದ ಕಾಫಿನಾಡಿಗೆ ಬಂದ ಬೌದ್ಧ ಪರಂಪರೆ 1959ರಲ್ಲಿ ಚೀನಾ ಟಿಬೆಟ್ ಆಕ್ರಮಿಸಿದ ನಂತರ ದಲೈ ಲಾಮಾ ಭಾರತದಲ್ಲಿ ಆಶ್ರಯ ಪಡೆದರು. 1960ರಲ್ಲಿ ಮೈಸೂರು ಸರ್ಕಾರ (ಈಗಿನ ಕರ್ನಾಟಕ) ಬೈಲುಕುಪ್ಪೆಯಲ್ಲಿ ಸುಮಾರು 3,000 ಎಕರೆ ಭೂಮಿಯನ್ನು ಟಿಬೆಟಿಯನ್ ನಿರಾಶ್ರಿತರಿಗೆ ನೀಡಿತು. 1961ರಲ್ಲಿ ಮೊದಲ ಟಿಬೆಟಿಯನ್ ನಿರ್ವಾಸಿ ವಸಾಹತು ಲುಗ್ಸುಂ ಸಾಂಡುಪ್ಲಿಂಗ್ ಸ್ಥಾಪಿತವಾಯಿತು. 1969ರಲ್ಲಿ ಡಿಕ್ಕಿ ಲಾರ್ಸೊ ಎಂಬ ಮತ್ತೊಂದು ವಸಾಹತು ಸ್ಥಾಪಿಸಲಾಯಿತು. ಇಂದು ಬೈಲುಕುಪ್ಪೆ ಟಿಬೆಟ್ ಹೊರತಾಗಿ ಪ್ರಪಂಚದಲ್ಲೇ ಅತಿದೊಡ್ಡ ಟಿಬೆಟಿಯನ್ ಜನವಸತಿ ಪ್ರದೇಶವಾಗಿದ್ದು 70,000ಕ್ಕೂ ಹೆಚ್ಚು ಟಿಬೆಟಿಯನ್ನರ ನೆಲೆಯಾಗಿದೆ. ದಕ್ಷಿಣ ಭಾರತದ ಅತಿದೊಡ್ಡ ಬೌದ್ಧ ಮಠ ಕೂಡ ಇಲ್ಲಿಯೇ ಇದೆ.