Select Location
All Locations
State
Region
City / District
Special Train: ರಾಯರ ಭಕ್ತರಿಗೆ ಗುಡ್‌ ನ್ಯೂಸ್;‌ ಮೈಸೂರಿನಿಂದ ಹೊರಡಲಿದೆ ವಿಶೇಷ ರೈಲು, ವೀಕೆಂಡ್‌ ಪ್ರವಾಸಕ್ಕೆ ಇದೇ ಬೆಸ್ಟ್!

Special Train: ರಾಯರ ಭಕ್ತರಿಗೆ ಗುಡ್‌ ನ್ಯೂಸ್;‌ ಮೈಸೂರಿನಿಂದ ಹೊರಡಲಿದೆ ವಿಶೇಷ ರೈಲು, ವೀಕೆಂಡ್‌ ಪ್ರವಾಸಕ್ಕೆ ಇದೇ ಬೆಸ್ಟ್!

ಬೆಂಗಳೂರು : ಕಲ್ಯಾಣ ಕರ್ನಾಟಕದ ಜನತೆಗೆ ರಾಜಧಾನಿ ಕನೆಕ್ಟಿವಿಟಿ ಟೆನ್ಷನ್ ಒಂದೆಡೆಯಾದರೆ, ರಾಯರ ಭಕ್ತರಿಗೆ ಮಂತ್ರಾಲಯಕ್ಕೆ (Mantralayam) ಹೋಗಲು ಸರಿಯಾದ ನೇರ ರೈಲಿನ ಕೊರತೆ (Direct Train Connectivity) ಕಾಡುತ್ತಿತ್ತು. ಆದರೀಗ, ದಕ್ಷಿಣ ಮಧ್ಯ ರೈಲ್ವೆ ಇಲಾಖೆ (South Central Railway) ಒಂದೇ ನಿರ್ಧಾರದಿಂದ ಲಕ್ಷಾಂತರ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ! ಹೌದು, ಕಾಕಿನಾಡ-ಮೈಸೂರು (Mysuru) ನಡುವಿನ ಬಹುನಿರೀಕ್ಷಿತ 'ಬೈ-ವೀಕ್ಲಿ ಎಕ್ಸ್‌ಪ್ರೆಸ್' (ರೈಲು ಸಂಖ್ಯೆ: 17289/17290) ಸೇವೆಗೆ ಅಧಿಕೃತ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮೇ 1, 2026 ರಿಂದ ಈ ರೈಲು ಹಳಿಯ ಮೇಲೆ ಕರುನಾಡಿಗೆ ಧಾರ್ಮಿಕ ಹಾಗೂ ವ್ಯಾವಹಾರಿಕ ಸೇತುವೆಯಾಗಲಿದೆ.

ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರ ಪಾಲಿಗೆ ಈ ರೈಲು ಸಾಕ್ಷಾತ್ ವರದಾನವೇ ಸರಿ. ಮೈಸೂರಿನಿಂದ ಸಂಜೆ 5:05ಕ್ಕೆ (ಹಾಗೂ ಬೆಂಗಳೂರು ಸಿಟಿಯಿಂದ ರಾತ್ರಿ 8:25ಕ್ಕೆ) ಹೊರಡುವ ರೈಲು, ಮರುದಿನ ಮುಂಜಾನೆ ಸರಿಯಾಗಿ 3:28ಕ್ಕೆ ಮಂತ್ರಾಲಯ ರಸ್ತೆ (Mantralayam Road) ನಿಲ್ದಾಣವನ್ನು ತಲುಪಲಿದೆ. ಅಂದರೆ, ಬೆಳಗ್ಗೆಯೇ ತುಂಗಭದ್ರೆಯಲ್ಲಿ ಮಿಂದೆದ್ದು, ಮುಂಜಾನೆಯ ಶಾಂತ ವಾತಾವರಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಇದು ಹೇಳಿಮಾಡಿಸಿದ ಸಮಯ!

ಕೇವಲ ಯಾತ್ರಾರ್ಥಿಗಳಿಗಷ್ಟೇ ಅಲ್ಲ, ಉತ್ತರ ಕರ್ನಾಟಕದ ಮಂದಿಗೂ ಈ ರೈಲು ಜಾಕ್‌ಪಾಟ್ ಹೊಡೆದಂತೆ. ಕಲ್ಯಾಣ ಕರ್ನಾಟಕದ ಪ್ರಮುಖ ನಿಲ್ದಾಣಗಳಾದ ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಸೇಡಂ ಭಾಗದ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರು ಬೆಂಗಳೂರು ಅಥವಾ ಮೈಸೂರಿಗೆ ಬರಲು ಇದು ಅತ್ಯುತ್ತಮ ಕೊಂಡಿಯಾಗಿದೆ. ಕಾಕಿನಾಡದಿಂದ ಸೋಮವಾರ ಮತ್ತು ಶುಕ್ರವಾರ ಹಾಗೂ ಮೈಸೂರಿನಿಂದ ಮಂಗಳವಾರ ಮತ್ತು ಶನಿವಾರ ಈ ರೈಲು ಸಂಚರಿಸಲಿದೆ.


News18 Kannada 1 day ago
Home Flash News