Select Location
All Locations
State
Region
City / District
ಬೆಂಗಳೂರಲ್ಲಿ ಹಕ್ಕಿಜ್ವರ ಭೀತಿ.. 7,400ಕ್ಕೂ ಅಧಿಕ ಕೋಳಿಗಳ ಹನನ! ಜನರು ಹೇಗೆ ಜಾಗೃತರಾಗಿರಬೇಕು?

ಬೆಂಗಳೂರಲ್ಲಿ ಹಕ್ಕಿಜ್ವರ ಭೀತಿ.. 7,400ಕ್ಕೂ ಅಧಿಕ ಕೋಳಿಗಳ ಹನನ! ಜನರು ಹೇಗೆ ಜಾಗೃತರಾಗಿರಬೇಕು?

ಬೆಂಗಳೂರಿನ ಹೊರವಲಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ 7,400ಕ್ಕೂ ಹೆಚ್ಚು ಕೋಳಿಗಳನ್ನಾ ನಾಶ ಮಾಡಿದ್ದಾರೆ. H5N1 ಹಕ್ಕಿಜ್ವರ ಪತ್ತೆ ಹಿನ್ನೆಲೆ ಸೋಂಕು ಹರಡದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿವೆ. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯದ ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ H5N1 ಹಕ್ಕಿಜ್ವರ ಪತ್ತೆಯಾಗಿದೆ. ಸೋಂಕು ಹರಡದಂತೆ ತಡೆಯಲು ಸರ್ಕಾರ ಮತ್ತು ಪಶುಪಾಲನಾ ಇಲಾಖೆಯು ವೇಗದ ಗತಿಯಲ್ಲಿ ಕಾರ್ಯಾಚರಣೆ ಕೈಗೊಂಡಿವೆ.

ಸೋಂಕು ಪತ್ತೆಯಾದ ತಕ್ಷಣವೇ ವೈಜ್ಞಾನಿಕವಾಗಿ ಕೋಳಿ ಹಾಗೂ ಮೊಟ್ಟೆಗಳನ್ನು ವಿಲೇವಾರಿ ಮಾಡಲಾಗಿದೆ. ಸುಮಾರು 7,444 ಕೋಳಿಗಳು ಮತ್ತು 14,000 ಕ್ಕೂ ಅಧಿಕ ಮೊಟ್ಟೆಗಳನ್ನು ನಾಶಪಡಿಸಲಾಗಿದೆ. ಇದರ ಜೊತೆಗೆ 2,250 ಕೆಜಿ ಕೋಳಿ ಆಹಾರವನ್ನು ಕೂಡಾ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 10 ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ 'ಒಸೆಲ್ಟಾಮಿವಿರ್' ಎನ್ನುವ ಔಷಧ ನೀಡಲಾಗಿದೆ. ಪ್ರಸ್ತುತ ಸರ್ಕಾರವು ಮತ್ಕೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದು, ಮತ್ಕೂರು ಗ್ರಾಮದ 3 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ವಲಯವೆಂದು ಘೋಷಿಸಲಾಗಿದೆ. 10 ಕಿ.ಮೀ ವ್ಯಾಪ್ತಿಯನ್ನು ನಿಗಾ ವಲಯವನ್ನಾಗಿ ಗುರುತಿಸಿ ಹೆಸರಘಟ್ಟದ ತರಬೇತಿ ಕೇಂದ್ರವನ್ನು ಮುಂದಿನ ಒಂದು ವರ್ಷದವರೆಗೆ ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಪ್ರಮುಖ ಸಲಹೆಗಳು ಹಕ್ಕಿಜ್ವರದ ಬಗ್ಗೆ ಆತಂಕ ಬೇಡ, ಆದರೆ ಜಾಗರೂಕತೆಯಿಂದ ಇರುವುದು ಅವಶ್ಯಕ ಎಂದು ಇಲಾಖೆ ತಿಳಿಸಿದೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ (High Temperature) ಸೇವಿಸುವುದರಿಂದ ಸೋಂಕಿನ ಅಪಾಯವಿರುವುದಿಲ್ಲ. ಸತ್ತ ಅಥವಾ ಅನಾರೋಗ್ಯ ಪೀಡಿತ ಹಕ್ಕಿಗಳನ್ನು ಮುಟ್ಟಬೇಡಿ ಅಥವಾ ಅವುಗಳ ಹತ್ತಿರ ಹೋಗಬೇಡಿ ಎಂಬ ಸಲಹೆ ನೀಡಿದ್ದಾರೆ. ನಿಮ್ಮ ಸುತ್ತಮುತ್ತ ಹಕ್ಕಿಗಳು ಅಸ್ವಾಭಾವಿಕವಾಗಿ ಸಾವನ್ನಪ್ಪುತ್ತಿದ್ದರೆ ತಕ್ಷಣ ಪಶುಸಂಗೋಪನೆ ಅಥವಾ ಆರೋಗ್ಯ ಇಲಾಖೆಗೆ ದೂರು ನೀಡಲು ಸೂಚಿಸಲಾಗಿದೆ. ಕೋಳಿ ಸಾಕಾಣಿಕೆ ಮಾಡುವವರು ಮತ್ತು ಮಾಂಸ ಮಾರಾಟಗಾರರು ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ಧರಿಸುವುದು ಉತ್ತಮ ಎನ್ನಲಾಗಿದೆ.


News First 1 hour ago
Home Flash News