ಅಮೆರಿಕ ಜೊತೆ ಮಾತುಕತೆ: ಇಂದು ಇಸ್ಲಾಮಾಬಾದ್ ತಲುಪಲಿದೆ ಇರಾನ್ ನಿಯೋಗ
ಇಸ್ಲಾಮಾಬಾದ್: ಅಮೆರಿಕ ಜೊತೆಗಿನ ಮಾತುಕತೆಯ ಸಲುವಾಗಿ ಇರಾನ್ ನಿಯೋಗವು ಗುರುವಾರ (ಏ.9) ರಾತ್ರಿ ಪಾಕಿಸ್ತಾನಕ್ಕೆ ತೆರಳಲಿದೆ ಎಂದು ಇರಾನ್ ರಾಯಭಾರಿ ರೆಜಾ ಅಮಿರಿ ಮೊಘದಮ್ ಹೇಳಿದ್ದಾರೆ. ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವ ಮೂಲಕ ಇಸ್ರೇಲ್ ಆಡಳಿತವು, ಶಾಂತಿ ಮಾತುಕತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ ಎಂಬ ಅಭಿಪ್ರಾಯ ಇರಾನ್‌ನಲ್ಲಿ ವ್ಯಕ್ತವಾಗಿದೆ. ಆದಾಗ್ಯೂ, ಅಮೆರಿಕದ ಮುಂದಿಟ್ಟಿರವ 10 ಅಂಶಗಳ ಷರತ್ತುಗಳ ಆಧಾರದ ಮೇಲೆ ಗಂಭೀರ ಚರ್ಚೆ ನಡೆಸುವ ಸಲುವಾಗಿ ಇರಾನ್ ನಿಯೋಗ ಇಂದು (ಗುರುವಾರ) ರಾತ್ರಿ ಇಸ್ಲಾಮಾದ್‌ಗೆ ತಲುಪಲಿದೆ ಎಂದು ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿ ರೆಜಾ ಅಮಿರಿ ಮೊಘದಮ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇಸ್ರೇಲ್ ಹಾಗೂ ಅಮೆರಿಕ ಸೇನೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ದಾಳಿ ನಡೆಸಿದ್ದವು. ದಾಳಿ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಸೇರಿದಂತೆ ಹಲವು ನಾಯಕರು ಹತ್ಯೆಯಾಗಿದ್ದು. ಇದರಿಂದ ಕೆರಳಿದ ಇರಾನ್, ಪ್ರತಿದಾಳಿ ಆರಂಭಿಸಿತ್ತು. ಹೀಗಾಗಿ, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಇದೀಗ, ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಅಮೆರಿಕ ಹಾಗೂ ಇರಾನ್ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.
ಇಸ್ಲಾಮಾಬಾದ್‌ನಲ್ಲಿ 2 ದಿನ ರಜೆ ಘೋಷಿಸಿದ ಪಾಕ್ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವ ಮೂಲಕ ಇಸ್ರೇಲ್ ಆಡಳಿತವು, ಶಾಂತಿ ಮಾತುಕತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ ಎಂಬ ಅಭಿಪ್ರಾಯ ಇರಾನ್‌ನಲ್ಲಿ ವ್ಯಕ್ತವಾಗಿದೆ.
ಆದಾಗ್ಯೂ, ಅಮೆರಿಕದ ಮುಂದಿಟ್ಟಿರವ 10 ಅಂಶಗಳ ಷರತ್ತುಗಳ ಆಧಾರದ ಮೇಲೆ ಗಂಭೀರ ಚರ್ಚೆ ನಡೆಸುವ ಸಲುವಾಗಿ ಇರಾನ್ ನಿಯೋಗ ಇಂದು (ಗುರುವಾರ) ರಾತ್ರಿ ಇಸ್ಲಾಮಾದ್‌ಗೆ ತಲುಪಲಿದೆ ಎಂದು ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿ ರೆಜಾ ಅಮಿರಿ ಮೊಘದಮ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇಸ್ರೇಲ್ ಹಾಗೂ ಅಮೆರಿಕ ಸೇನೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ದಾಳಿ ನಡೆಸಿದ್ದವು. ದಾಳಿ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಸೇರಿದಂತೆ ಹಲವು ನಾಯಕರು ಹತ್ಯೆಯಾಗಿದ್ದು. ಇದರಿಂದ ಕೆರಳಿದ ಇರಾನ್, ಪ್ರತಿದಾಳಿ ಆರಂಭಿಸಿತ್ತು. ಹೀಗಾಗಿ, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಇದೀಗ, ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಅಮೆರಿಕ ಹಾಗೂ ಇರಾನ್ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.
ಇಸ್ಲಾಮಾಬಾದ್‌ನಲ್ಲಿ 2 ದಿನ ರಜೆ ಘೋಷಿಸಿದ ಪಾಕ್