Select Location
All Locations
State
Region
City / District
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹೇಳಿಕೆಗೆ ಮೋದಿ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹೇಳಿಕೆಗೆ ಮೋದಿ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ರಂಗೇರಿದೆ. ಇದರ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೋದಿ, ‘ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಯೋಜನೆಗಳು ಮೆಟ್ರೋ, ರೈಲುಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾರ್ವಜನಿಕ ಸಾರಿಗೆಯ ಮೇಲೆ ಹಾನಿ ಮಾಡುತ್ತವೆ’ ಎಂದಿದ್ದರು. ಅವರ ಈ ಹೇಳಿಕೆ ಬೆನ್ನಲ್ಲೆ ‘ಮೋದಿ ಅವರಿಗೆ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ’ ಎಂದು ಎಂ.ಕೆ. ಸ್ಟಾಲಿನ್ ಕಟುವಾಗಿ ಟೀಕಿಸಿದ್ದಾರೆ. ಮಂಗಳವಾರ ಡಿಎಂಕೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಎಂ.ಕೆ. 

ಸ್ಟಾಲಿನ್, ‘ಪ್ರಧಾನಿಯವರು ಮಹಿಳೆಯರ ಪ್ರಗತಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುವುದು ತೋರಿಸುತ್ತದೆ. ತಮಿಳುನಾಡಿನಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತದೆ. ಇವರ ಈ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳ್ಳುವಂತೆ ಮಾಡುತ್ತವೆ. ತಮಿಳುನಾಡು ಅತ್ಯುನ್ನತ ಮಟ್ಟದಲ್ಲಿ ಮುಂದುವರಿಯಬೇಕಾದರೆ, 'ದ್ರಾವಿಡ ಮಾದರಿ 2.0' ಸರ್ಕಾರವನ್ನು ಮತ್ತೆ ರಚಿಸಬೇಕು. ಡಿಎಂಕೆ ಮರಳುವುದರಿಂದ ರಾಜ್ಯಕ್ಕೆ ಹೆಚ್ಚಿನ ಅಭಿವೃದ್ಧಿ ಖಚಿತವಾಗುತ್ತದೆ’ ಎಂದು ಬತ್ತಿ ಹೇಳಿದರು. ತಮಿಳುನಾಡಿನ ಹಕ್ಕುಗಳನ್ನು ಬಿಜೆಪಿಗೆ ಒಪ್ಪಂದ ಮಾಡಿದ್ದಕ್ಕಾಗಿ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಸ್ಟಾಲಿನ್ ಅಪಹಾಸ್ಯ ಮಾಡಿದರು. ಪಳನಿಸ್ವಾಮಿ ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರ ಹೆಸರಿನ ಪಕ್ಷವನ್ನು ಅಮಿತ್ ಶಾ ಡಿಎಂಕೆ ಆಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು.


Prajavani 1 month ago
Home Flash News