Mojtaba Khamenei Health Update: ಇರಾನ್ ಸರ್ವೋಚ್ಚ ನಾಯಕನ ಸ್ಥಿತಿ ಗಂಭೀರ: ಪ್ರಜ್ಞಾಹೀನ, ಯುದ್ಧದ ಸದ್ದಿಲ್ಲ, ಕದನ ವಿರಾಮದ ಅರಿವಿಲ್ಲ!
ಇರಾನ್ ಅಮೆರಿಕ ಯುದ್ಧದ ಮಧ್ಯೆ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khameni) ಆರೋಗ್ಯದ ಬಿಗ್ ಅಪ್ಡೇಟ್ (Health Update) ಬಂದಿದೆ. ಬ್ರಿಟಿಷ್ ಪತ್ರಿಕೆ ದಿ ಟೈಮ್ಸ್ ಪ್ರಕಾರ, ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಂತವಾಗಿದ್ದಾರೆ. ಆದರೆದೇಶವನ್ನು ನಡೆಸಲು ಅಸಮರ್ಥವಾಗಿದ್ದಾರೆ ಎಂದು ತಿಳಿದುಬಂದಿದೆ. ಮೊಜ್ತಾಬಾ ಖಮೇನಿ ಪ್ರಸ್ತುತ ಪ್ರಜ್ಞಾಹೀನರಾಗಿದ್ದು, ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಮೊಜ್ತಬಾ ಖಮೇನಿ ಸದ್ಯ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಆಡಳಿತ ನಡೆಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ವರದಿ ಹೇಳುತ್ತದೆ. ಅವರಿಗೆ ಯುದ್ಧದ ಸುದ್ದಿಯಿಲ್ಲ, ಕದನ ವಿರಾಮದ ಅರಿವಿಲ್ಲ ಎಂದು ತಿಳಿದುಬಂದಿದೆ.
ಮೊಜ್ತಬಾ ಖಮೇನಿ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್!
ಈ ಮಾಹಿತಿ ಒಂದು ರಾಜತಾಂತ್ರಿಕ ಜ್ಞಾಪಕ ಪತ್ರದಲ್ಲಿ (ಡಿಪ್ಲೊಮ್ಯಾಟಿಕ್ ಮೆಮೊ) ಇದೆ. ಈ ಜ್ಞಾಪಕ ಪತ್ರ ಅಮೆರಿಕ ಮತ್ತು ಇಸ್ರೇಲಿ ಗುಪ್ತಚರ ಸಂಸ್ಥೆಗಳ ಮಾಹಿತಿಯನ್ನು ಆಧರಿಸಿದೆ. ಇದನ್ನು ಗಲ್ಫ್ ರಾಷ್ಟ್ರಗಳಲ್ಲಿನ ಮಿತ್ರ ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಪತ್ರಿಕೆಯ ಪ್ರಕಾರ, ಮೊಜ್ತಬಾ ಖಮೇನಿಗೆ ಟೆಹ್ರಾನ್‌ನಿಂದ ಸುಮಾರು 140 ಕಿಲೋಮೀಟರ್ ದಕ್ಷಿಣಕ್ಕಿರುವ ಪವಿತ್ರ ನಗರ ಕೋಮ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದಿನ ವರದಿಗಳಲ್ಲಿ ಮೊಜ್ತಬಾ ರಷ್ಯಾಕ್ಕೆ ಕರೆದೊಯ್ಯಲ್ಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಷ್ಯಾದ ರಾಯಭಾರಿ, ಅವರು ಇರಾನ್‌ನಲ್ಲೇ ಉಳಿದಿದ್ದಾರೆ ಎಂದು ತಿಳಿಸಿದ್ದರು. ಈಗ ದಿ ಟೈಮ್ಸ್ ಈ ಮಾಹಿತಿಯನ್ನು ದೃಢಪಡಿಸಿದೆ.
ಏನಾಗಿತ್ತು? ದಾಳಿಯಿಂದ ಬದುಕುಳಿದಿದ್ದು ಹೇಗೆ?
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ತಂದೆ, ಇರಾನ್‌ನ ದೀರ್ಘಕಾಲದ ಸರ್ವೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ ಕುಟುಂಬದ ಹಲವು ಸದಸ್ಯರು ಬಲಿಯಾಗಿದ್ದರು.ಅದೇ ದಾಳಿಯಲ್ಲಿ ಮೊಜ್ತಬಾ ಕೂಡ ಗಾಯಗೊಂಡಿದ್ದರು. ಆದರೆ ಅವರು ಅದೃಷ್ಟವಶಾತ್ ಬದುಕುಳಿದಿದ್ದು, ದಾಳಿ ನಡೆಯುವ ಕೆಲವೇ ನಿಮಿಷಗಳ ಮುಂಚೆ ಅವರು ತಮ್ಮ ಮನೆಯ ತೋಟಕ್ಕೆ ಹೊರಟಿದ್ದರು ಎಂಬುದು ತಿಳಿದುಬಂದಿದೆ.