ಬೆಂಗಳೂರಲ್ಲಿ ಒಂದು ಮೊಟ್ಟೆಗೆ 4.80 ರೂಪಾಯಿ!
ಇನ್ನೂ ಕೆಲವೇ ದಿನಗಳ ಹಿಂದೆ ಮೊಟ್ಟೆಯ ದರ ₹7.05 ರಷ್ಟಿದ್ದರೆ, ಇದೀಗ ₹4.80ಕ್ಕೆ ಭಾರೀ ಕುಸಿತ ಕಂಡಿದೆ. ಸುಮಾರು 50% ರಷ್ಟು ವ್ಯಾಪಾರದಲ್ಲಿ ಕುಸಿತ ಉಂಟಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಬೆಲೆ ಇಳಿಕೆಯಿಂದ ವ್ಯಾಪಾರಸ್ಥರಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮೊಟ್ಟೆ ವ್ಯಾಪಾರಿಗಳಿಗೆ ಇದೀಗ ಸಂಕಷ್ಟದ ದಿನಗಳು ಎದುರಾಗಿವೆ. ಯುದ್ಧದ ಪರಿಣಾಮ, ಗ್ಯಾಸ್ ದರ ಏರಿಕೆ, ಹಾಗೂ ರಂಜಾನ್ ಸಮಯದಲ್ಲಿ ಹೋಟೆಲ್‌ಗಳ ಕಾರ್ಯಾಚರಣೆ ಕಡಿಮೆಯಾಗಿರುವುದು ಮೊಟ್ಟೆ ಮಾರುಕಟ್ಟೆಗೆ ನೇರ ಹೊಡೆತ ನೀಡಿದೆ. ಇದರಿಂದ ಮೊಟ್ಟೆ ಬೇಡಿಕೆ ಕುಸಿತ ಕಂಡಿದ್ದು, ವ್ಯಾಪಾರಸ್ಥರು ಆತಂಕದಲ್ಲಿ ಮುಳುಗಿದ್ದಾರೆ.
ಇನ್ನೂ ಕೆಲವೇ ದಿನಗಳ ಹಿಂದೆ ಮೊಟ್ಟೆಯ ದರ ₹7.05 ರಷ್ಟಿದ್ದರೆ, ಇದೀಗ ₹4.80ಕ್ಕೆ ಭಾರೀ ಕುಸಿತ ಕಂಡಿದೆ. ಸುಮಾರು 50% ರಷ್ಟು ವ್ಯಾಪಾರದಲ್ಲಿ ಕುಸಿತ ಉಂಟಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಬೆಲೆ ಇಳಿಕೆಯಿಂದ ವ್ಯಾಪಾರಸ್ಥರಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗುತ್ತಿದೆ.
ಇದನ್ನೂ ಓದಿ:ಸರ್ಕಾರದ ವಿರುದ್ಧ ಖಾದರ್ ಅಸಮಾಧಾನ.. ‘ಕಲಾಪ ನಡೆಸಲ್ಲ’ ಎಂದು ಎದ್ದು ಹೋದ ಸ್ಪೀಕರ್
ರಫ್ತು ಪ್ರಮಾಣ ಕಡಿಮೆಯಾಗಿರುವುದು ಕೂಡ ಮತ್ತೊಂದು ದೊಡ್ಡ ಕಾರಣವಾಗಿದೆ. ಹೊರರಾಜ್ಯ ಮತ್ತು ವಿದೇಶಗಳಿಗೆ ಸಾಗುವ ಮೊಟ್ಟೆಗಳ ಪ್ರಮಾಣ ಇಳಿಕೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಸ್ಟಾಕ್ ಹೆಚ್ಚಾಗಿದೆ.
ಪರಿಣಾಮವಾಗಿ ಬೆಲೆಗಳು ಕುಸಿಯುತ್ತಿವೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಇದರಿಂದ ಕೋಳಿ ಸಾಗಾಣಿಕಾರರು, ಮೊಟ್ಟೆ ವ್ಯಾಪಾರಿಗಳು ಮತ್ತು ಸಂಬಂಧಿತ ಉದ್ಯಮಗಳ ಮೇಲೆ ಭಾರೀ ಒತ್ತಡ ಉಂಟಾಗಿದೆ. ಮೊಟ್ಟೆ ವ್ಯಾಪಾರದಲ್ಲಿ ನಂಬಿಕೆ ಇಟ್ಟು ಬದುಕುತ್ತಿದ್ದ ಅನೇಕ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ ಎನ್ನಲಾಗಿದೆ. ವ್ಯಾಪಾರವೇ ಇಲ್ಲದಂತಾಗಿದೆ, ದರ ಕೂಡ ಕುಸಿದಿದೆ. ಈ ಸ್ಥಿತಿ ಮುಂದುವರಿದರೆ ಬದುಕು ಕಷ್ಟವಾಗುತ್ತದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.