... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ನಂಬರ್ 1 ಸ್ಥಾನ ಪಡೆದಿದ್ದ ಕೆಎಂಎಫ್..!

ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ನಂಬರ್ 1 ಸ್ಥಾನ ಪಡೆದಿದ್ದ ಕೆಎಂಎಫ್.. ಆದ್ರೆ ಬೇಸಿಗೆ ಆರಂಭದಲ್ಲೇ ಹಾಲು ಸಂಗ್ರಹದಲ್ಲಿ ಇಳಿಕೆ ಕಂಡು ಬಂದಿದೆ..!

ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ನಂಬರ್ 1 ಸ್ಥಾನ ಪಡೆದಿದ್ದ ಕೆಎಂಎಫ್, ಇದೀಗ ಬೇಸಿಗೆ ಆರಂಭವಾಗುತ್ತಿದಂತೆ ಹಾಲು ಸಂಗ್ರಹದಲ್ಲಿ 95 ಲಕ್ಷಕ್ಕೆ ಕುಸಿತ ಕಂಡು ಬಂದಿದ್ದು, ಭಾರಿ ಪ್ರಮಾಣದ ಇಳಿಕೆಯಾಗಿದೆ. ಬೆಂಗಳೂರು: ರಾಜ್ಯದಲ್ಲಿ ಹಾಲು ಉತ್ಪಾದನೆಗೆ ಹೆಸರುವಾಸಿಯಾದ ಕೆಎಮ್​ಎಫ್​ ಇದೀಗ ಬೇಸಿಗೆ ಆರಂಭದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಬಿರು ಬೇಸಿಗೆ ಕಾರಣ ನಂದಿನಿ ಹಾಲು ಉತ್ಪಾದನೆ 95 ಲಕ್ಷ ಲೀಟರ್ ಕುಸಿತ ಕಂಡಿದೆ. ಈ ಮೊದಲು ಕೆಎಮ್​ಎಫ್​ನಲ್ಲಿ ನಿತ್ಯ 1 ಕೋಟಿ ಲೀಟರ್​ ಹಾಲು ಉತ್ಪಾದನೆ ಸಂಗ್ರಹವಾಗುತ್ತಿತ್ತು. 

ಬೇಸಿಗೆ ಶುರುವಾದ ಬಳಿಕ ಹಸುಗಳಿಗೆ ಮೇವು, ಹುಲ್ಲಿನ ಕೊರತೆ ಹೆಚ್ಚಾಗಿದೆ. ಹೀಗಾಗಿ ಬೇಸಿಗೆ ಆರಂಭದಲ್ಲೇ ರಾಜ್ಯ ಹೈನೋದ್ಯಮ ಮೇವು ಕೊರತೆಯಿಂದ ಹೈರಾಣ್​ ಆಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಾಲಿನ ಇಳುವಳಿ ಕುಂಠಿತವಾಗಿದೆ. ಹಾಲು ಉತ್ಪಾದನೆ ಕುಸಿತದಿಂದ ಹೈನುಗಾರರ ಆದಾಯಕ್ಕೂ ಸಹ ಕುತ್ತು ಬಂದಿದೆ. ಚಳಿಗಾಲದಲ್ಲಿ ಹಾಲಿನ ಉತ್ಪಾದನೆ ನಿತ್ಯ 1 ಕೋಟಿ ಲೀಟರ್ ಇತ್ತು. ಬೇಸಿಗೆ ಆರಂಭವಾಗುತ್ತಿದ್ದಂತೆ ಹಾಲು ಸಂಗ್ರಹ ದಿಢೀರ್ ಕುಸಿತ ಕಂಡಿದೆ. ಏಪ್ರಿಲ್- ಮೇನಲ್ಲಿ ಮತ್ತಷ್ಟು ಹಾಲು ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ ಎಂದು ಕೆಎಂಎಫ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

 ಇದನ್ನೂ ಓದಿ: ‘ನಿಷ್ಕ್ರಿಯ ಇಚ್ಛಾಮರಣ’ಕ್ಕೆ ಸುಪ್ರೀಂ ಅನುಮತಿ.. ಹರೀಶ್ ರಾಣಾರ ತೀರ್ಪು ಓದುವಾಗ ಕಣ್ಣೀರಿಟ್ಟ ಜಸ್ಟೀಸ್ ಪರ್ದಿವಾಲಾ! ರಾಜ್ಯದಲ್ಲಿ ಕೆಎಮ್​ಎಫ್​ ನಿತ್ಯ ಒಂದು ಕೋಟಿ ಹಾಲು ಉತ್ಪಾದನೆ ಮಾಡಿ ಮೈಲಿಗಲ್ಲು ಸಾಧಿಸಿತ್ತು. ಬೇಸಿಗೆ ಆರಂಭದ ಬೆನ್ನಲ್ಲೇ, ನಿತ್ಯ 4 ರಿಂದ 5 ಲಕ್ಷ ಲೀಟರ್ ಹಾಲು ಉತ್ಪಾದನೆ ಇಳಿಕೆಯಾಗಿದೆ. ಯಾವಾಗಲೂ ಬೇಸಿಗೆಯಲ್ಲಿ ಹಾಲು ಉತ್ಪಾದನೆ ಇಳಿಕೆ ಕಂಡಿದ್ದು, ಈ ಬಾರಿಯೂ ಸಹ ಹಾಲು ಸಂಗ್ರಹದಲ್ಲಿ ಕುಸಿತ ಕಂಡಿದೆ ಅಂತ ಕೆಎಂಎಫ್‌ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

Source : News First

1 hour ago

Home Flash News