ಒಡಿಶಾದ ಕಲ್ಲು ಕ್ವಾರಿಯಲ್ಲಿ ಭಾರಿ ಸ್ಫೋಟ, ಹಲವರು ಮೃತಪಟ್ಟಿರುವ ಶಂಕೆ
ಧೆಂಕನಲ್, ಜನವರಿ 04: ಒಡಿಶಾದ ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಹಲವರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಲ್ಲು ಕ್ವಾರಿಯಲ್ಲಿ ಬಂಡೆಗಳ ದೊಡ್ಡ ಭಾಗ ಕುಸಿದು ಹಲವಾರು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಗೋಪಾಲಪುರ ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಕಾರ್ಮಿಕರು ಕಲ್ಲುಗಳನ್ನು ಕೊರೆಯುತ್ತಿರುವಾಗ ಘಟನೆ ಸಂಭವಿಸಿದೆ.ಸ್ಫೋಟದಿಂದಾಗಿ ಬಂಡೆಗಳು ಕುಸಿದು ಬಿದ್ದಿವೆ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ದೊಡ್ಡ ಕಲ್ಲುಗಳ ಕೆಳಗೆ ಎರಡರಿಂದ ನಾಲ್ಕು ಜನರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.