ಇನ್ಫೋಸಿಸ್‌ನಿಂದ ಭರ್ಜರಿ ಗುಡ್ ನ್ಯೂಸ್, ಹೊಸಬರ ಸ್ಯಾಲರಿ 21 ಲಕ್ಷ ರೂಪಾಯಿಗೆ ಏರಿಕೆ
ಬೆಂಗಳೂರು (ಡಿ.25) ವಿಶ್ವದ ಅತೀ ದೊಡ್ಡ ಐಟಿ ಕಂಪನಿಗಳಲ್ಲಿ ಇನ್ಫೋಸಿಸ್ ಕೂಡ ಒಂದು. ಬೆಂಗಳೂರಿನ ಹೆಮ್ಮೆಯ ಇನ್ಫೋಸಿಸ್ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ. ಇದೀಗ ಇನ್ಫೋಸಿಸ್ ಫ್ರೆಶರ್ಸ್‌ಗೆ ಗುಡ್ ನ್ಯೂಸ್ ನೀಡಿದೆ. ಇನ್ಫೋಸಿಸ್ ಕಾಲೇಜು ಕ್ಯಾಂಪಸ್ ಇಂಟರ್ವ್ಯೂಗಿಂತ ತನ್ನ ಕ್ಯಾಂಪಸ್‌ನಲ್ಲೇ ನೇರ ಸಂದರ್ಶನ ಮೂಲಕ ಪ್ರತಿಭೆಗಳನ್ನು ಆಯ್ಕೆ ಮಾಡಲು ಹೆಚ್ಚು ಒತ್ತು ನೀಡಲು ಮುಂದಾಗಿದೆ. ಸದ್ಯ ಎಐ (ಆರ್ಟಿಫೀಶಿಯಲ್ ಇಂಟಲಿಜೆನ್ಸ್ ), ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಪದವಿದವರಿಗೆ ಉತ್ತಮ ವೇತನ ನೀಡಿ ಆಯ್ಕೆ ಮಾಡಲು ಮುಂದಾಗಿದೆ. ಆಕರ್ಷಕ ವೇತನಕ್ಕಾಗಿ ಇದೀಗ ಇನ್ಫೋಸಿಸ್ ಹೊಸಬರ ವೇತನವನ್ನು ಗರಿಷ್ಠ 21 ಲಕ್ಷ ರೂಪಾಯಿಗೆ ಏರಿಕೆ ಮಾಡಲು ಮುಂದಾಗಿದೆ.