ಮುಂಬೈ: ಏಷ್ಯಾ ಕಪ್ ಕೂಟದ ತಂಡದಿಂದ ಕಡೆಗಣಿಸಲ್ಪಟ್ಟಿದ್ದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಇದೀಗ ಬಿಸಿಸಿಐ (BCCI) ಪರಿಗಣಿಸಿದೆ. ಆಸ್ಟ್ರೇಲಿಯಾ ಎ ವಿರುದ್ದದ ಎರಡು ಬಹುದಿನಗಳ ಪಂದ್ಯಕ್ಕೆ ಇದೀಗ ಭಾರತ ಎ ತಂಡವನ್ನು ಪ್ರಕಟಿಸಿದ್ದು, ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಲಾಗಿದೆ.
ಅಯ್ಯರ್ ಪ್ರಸ್ತುತ ಬೆಂಗಳೂರಿನಲ್ಲಿದ್ದು, ಕೇಂದ್ರ ವಲಯ ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಪಶ್ಚಿಮ ವಲಯವನ್ನು ಪ್ರತಿನಿಧಿಸುತ್ತಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅವರ ಪ್ರದರ್ಶನವು ನಿರಾಶಾದಾಯಕವಾಗಿತ್ತು. 25 ರನ್‌ಗಳಿಸಿದ್ದ ವೇಳೆ ಖಲೀಲ್ ಅಹ್ಮದ್ ಎಸೆತಕ್ಕೆ ಔಟ್ ಆದರು. ಭಾರತ ಎ ತಂಡವು ಆಸ್ಟ್ರೇಲಿಯಾ ಎ ವಿರುದ್ದ ಎರಡು ಬಹುದಿನಗಳ ಪಂದ್ಯ ಆಡಲಿದೆ. ಸೆ.19ರಿಂದ ಮತ್ತು ಸೆ.26ರಿಂದ ಈ ಪಂದ್ಯಗಳು ಆರಂಭವಾಗಲಿದೆ. ಎರಡೂ ಪಂದ್ಯಗಳು ಲಕ್ನೋದ ಎಖನಾ ಸ್ಟೇಡಿಯಂನಲ್ಲಿ ನಡೆಯಲಿದೆ.