ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಮಾಸ್ಕೋದಲ್ಲಿ ಮಾತುಕತೆಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಹ್ವಾನ ನೀಡಿದ್ದಾರೆ. ಆದರೆ ಇದನ್ನು ತಿರಸ್ಕರಿಸಿರುವ ಝೆಲೆನ್ಸ್ಕಿ ಉಕ್ರೇನ್ ಮೇಲೆ ಪ್ರತಿದಿನ ಕ್ಷಿಪಣಿ ದಾಳಿಯನ್ನು ಮುಂದುವರೆಸಿರುವ ದೇಶದ ರಾಜಧಾನಿಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಎಬಿಸಿ ನ್ಯೂಸ್‌ನ ಜಾಗತಿಕ ವ್ಯವಹಾರಗಳ ವರದಿಗಾರ ಮಾರ್ಥಾ ರಾಡಾಟ್ಜ್ ಅವರೊಂದಿಗಿನ ಸಂದರ್ಶನ ವೇಳೆ ಮಾತನಾಡಿದ ಝೆಲೆನ್ಸ್ಕಿ, ಪ್ರಾಮಾಣಿಕವಾಗಿ ಚರ್ಚೆ ನಡೆಸಲು ಬಯಸಿದ್ದರೆ ರಷ್ಯಾ ಅಧ್ಯಕ್ಷರು ಉಕ್ರೇನ್ ರಾಜಧಾನಿ ಕೈವ್‌ಗೆ ಬರಬೇಕೆಂದು ಸೂಚಿಸಿದರು.
Russia-Ukraine war: ಮಾತುಕತೆಗಾಗಿ ಉಕ್ರೇನ್ ಅಧ್ಯಕ್ಷರಿಗೆ ಪುಟಿನ್ ಆಹ್ವಾನ; ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದೇನು
Source : Smacy News
1 day ago