ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೂ ಜನರ ಕಲ್ಯಾಣಕ್ಕಾಗಿ ‘ಸುಲಭ ಜೀವನ–ಸುಖೀ ಜೀವನʼ ಧ್ಯೇಯಕ್ಕೆ ಬದ್ಧವಾದ ಕಾರ್ಯ ಯೋಜನೆಗಳೊಂದಿಗೆ ಹೆಜ್ಜೆ ಹಾಕುತ್ತಿದೆ.
ಭಾರತದ ಅರ್ಥ ವ್ಯವಸ್ಥೆಗೆ ಸುಭದ್ರ ಬುನಾದಿ ಹಾಕಿಕೊಟ್ಟ ಜಿಎಸ್‌ಟಿ ಇದೀಗ ಒಂಭತ್ತನೇ ಹಣಕಾಸು ವರ್ಷ ಪ್ರವೇಶಿಸಿದೆ. ಭಾರತ ವಿಶ್ವದ 3ನೇ ಬಲಿಷ್ಠ ಆರ್ಥಿಕತೆಯ ಹೊಸ್ತಿಲಲ್ಲಿರುವಾಗ ‘ಸರ್ವೇ ಜನಾಃ ಸುಖಿನೋ ಭವಂತು, ಸರ್ವೇ ಸಂತು ನಿರಾಮಯಾಃʼ ಎನ್ನುವುದಕ್ಕೆ ಅನ್ವರ್ಥಕವಾಗಿ ಹೊಸ ಸ್ವರೂಪ ಪಡೆದುಕೊಂಡಿದೆ. ನಾಡ ಹಬ್ಬ ‘ನವರಾತ್ರಿʼಗೆ ನರೇಂದ್ರ ಮೋದಿಯವರು ‘ಜನೋಪಯೋಗಿ ಜಿಎಸ್‌ಟಿ-2ʼಯನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.