ಪಂಜಾಬಿ ಖ್ಯಾತ ಗಾಯಕ ರಾಜ್‌ವೀರ್ ಜವಾಂದ ನಿಧನ
ಚಂಡೀಗಢ: ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಂಜಾಬಿ ನಟ, ಗಾಯಕ ರಾಜ್‌ವೀರ್ ಜವಾಂದ ಅವರು ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಜವಾಂದ ಅವರು ಪಂಜಾಬಿ ಶೋಬಿಜ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದರು. ಸೆಪ್ಟೆಂಬರ್ 27 ರಂದು ಮೋಟಾರ್ ಸೈಕಲ್‌ನಲ್ಲಿ ಶಿಮ್ಲಾಕ್ಕೆ ಹೋಗುತ್ತಿದ್ದಾಗ ಸೋಲನ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತ ಸಂಭವಿಸಿದೆ.