ಅಮೆರಿಕದಲ್ಲಿ ಅಬ್ದುಲ್ ಗೆಲುವು, ಯುಪಿಯಲ್ಲೂ ಅಬ್ದುಲ್ ಗೆಲ್ಲುವ ದಿನ ದೂರವಿಲ್ಲ: ಒವೈಸಿ
ನವದೆಹಲಿ: ವಿವಾಹಿತ ಮಹಿಳೆಯು ತನ್ನ ಪತಿಯ ಮನೆಯಲ್ಲಿ ಹಿಂಸಾಚಾರ ಎದುರಿಸುತ್ತಿದ್ದರೆ ಅಂತಹವರಿಗೆ ತಮ್ಮ ಪೋಷಕರು ಬೆಂಬಲ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
2018ರ ಏರ್ ಹೋಸ್ಟೆಸ್ ಅನಿಸ್ಸಿಯಾ ಬಾತ್ರಾ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪತಿ ಮಯಾಂಕ್ ಸಿಂಘ್ವಿ ಅವರನ್ನು ಕ್ರೌರ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳಿಂದ ಮುಕ್ತಗೊಳಿಸುವ ಸಂದರ್ಭದಲ್ಲಿ ಈ ರೀತಿ ಹೇಳಿದೆ.
ಈ ವೇಳೆ ವಿವಾಹ ಸಂಬಂಧಿತ ವಿವಾದಗಳಲ್ಲಿ ಪತಿಯ ಸಂಬಂಧಿಕರನ್ನು ದೊಡ್ಡ ಮಟ್ಟದ ಆರೋಪಗಳ ಮೂಲಕ ಸಿಲುಕಿಸುವ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಿಂಸಾಚಾರಕ್ಕೆ ಒಳಪಟ್ಟ ವಿವಾಹಿತ ಮಹಿಳೆಗೆ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಹೇಳುವುದು ತಪ್ಪು. ಮಗಳು ತವರಿಗೆ ಮರಳಿ ಬರುವುದನ್ನು ಎಂದಿಗೂ ಅಪಮಾನ ಎಂದು ಪರಿಗಣಿಸಬಾರದು ಎಂದು ಹೇಳಿದೆ.