15 ಬಾರಿ ʼಹನುಮಾನ್ ಅಂಶ್ʼ ಸಿನಿಮಾ ವೀಕ್ಷಿಸಿ ಕಣ್ಣೀರಿಟ್ಟ ನೀಮ್ ಕರೋಲಿ ಬಾಬಾ ಪುತ್ರಿ
ಮುಂಬಯಿ: ʼಹನುಮಾನ್ ಅಂಶ್ʼ (Hanuman Ansh) ಚಿತ್ರದ ಕಥೆಯು ನೀಮ್ ಕರೋಲಿ ಬಾಬಾ (Neem Karoli Baba) ಅವರ ಕುಟುಂಬದೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಏರ್ಪಡಿಸಿದೆ.
ಬಾಬಾ ಅವರ ಪುತ್ರಿ ಗಿರಿಜಾ ಜಿ (ಅಮ್ಮಾ ಜಿ ಎಂದೇ ಪ್ರಸಿದ್ಧರು) ಚಿತ್ರ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 15 ಬಾರಿ ಈ ಸಿನಿಮಾವನ್ನು ವೀಕ್ಷಿಸಿದ್ದು, ಪ್ರತಿ ಬಾರಿಯೂ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂದು ನಿರ್ಮಾಪಕಿ ರಾಗಿಣಿ ಸೋನಾ ಬಹಿರಂಗಪಡಿಸಿದ್ದಾರೆ.
ʼSCREENʼಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಗಿಣಿ, ಸಿನಿಮಾ ಬಿಡುಗಡೆಗೂ ಮುನ್ನ ಅಮ್ಮಾ ಜಿ ಅವರನ್ನು ಭೇಟಿಯಾದ ಕ್ಷಣ ಹಾಗೂ ತಮ್ಮನ್ನು ಭಾವುಕರನ್ನಾಗಿಸಿದ ಅನುಭವವನ್ನು ನೆನಪಿಸಿಕೊಂಡರು. ನಿರ್ದೇಶಕ ವಿಶಾಲ್ ಚತುರ್ವೇದಿ ಮತ್ತು ತಾವು ಸಿನಿಮಾಗೆ ಆಶೀರ್ವಾದ ಪಡೆಯಲು ಬಾಬಾ ಅವರ ಪುತ್ರಿಯನ್ನು ಸಂಪರ್ಕಿಸಿದ್ದಾಗಿ ಅವರು ತಿಳಿಸಿದ್ದಾರೆ.
ಫೋನ್ ಸಂಭಾಷಣೆಯ ಸಂದರ್ಭದಲ್ಲಿ ತಾವು, ವಿಶಾಲ್ ಮತ್ತು ಅಮ್ಮಾ ಜಿ ಮಾತನಾಡುತ್ತಿದ್ದಾಗ, "ಹನುಮಾನ್ ಅಂಶ್ʼʼ ಸಿನಿಮಾ ನೋಡಲು ಬಯಸುತ್ತೀರಾ?" ಎಂದು ಕೇಳಿದ್ದಾಗಿ ರಾಗಿಣಿ ಹೇಳಿದರು. ಅದಕ್ಕೆ ಅಮ್ಮಾ ಜಿ, "ಹೌದು, ಸರಿಯಾದ ಸಮಯ ಬಂದಾಗ ನಾನು ಸಿನಿಮಾ ವೀಕ್ಷಿಸುತ್ತೇನೆ" ಎಂದು ಉತ್ತರಿಸಿದ್ದರು.
ಅಮ್ಮಾ ಸುಮಾರು 15 ಬಾರಿ ಸಿನಿಮಾ ಅದನ್ನು ನೋಡಿದ್ದಾರೆ. ಪ್ರತಿ ಬಾರಿಯೂ ಸಿನಿಮಾ ವೀಕ್ಷಿಸಿ ಕಣ್ಣೀರಿಟ್ಟಿದ್ದಾರೆ ಎಂದು ರಾಗಿಣಿ ಸ್ಮರಿಸಿದ್ದಾರೆ.
ಸಂಭಾಷಣೆಯ ವೇಳೆ ನಡೆದ ಮತ್ತೊಂದು ವೈಯಕ್ತಿಕ ವಿವರವನ್ನು ನಿರ್ಮಾಪಕಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಮಾಡಲು ನಿಮಗೆ ಪ್ರೇರಣೆ ನೀಡಿದ್ದು ಏನು ಎಂದು ಅಮ್ಮಾ ಜಿ ಕೇಳಿದಾಗ, ರಾಗಿಣಿ ತಾವು ಆರನೇ ವಯಸ್ಸಿನಲ್ಲಿ ನೀಮ್ ಕರೋಲಿ ಬಾಬಾ ಅವರನ್ನು ಭೇಟಿಯಾದದ್ದನ್ನು ಹಾಗೂ ವಿಶಾಲ್ ತಮ್ಮ ಸಂಶೋಧನೆಯ ಬಗ್ಗೆ ವಿವರಿಸಿದರು.
ತಮ್ಮ ತಂದೆ ನೈನಿತಾಲ್‌ನಲ್ಲಿ ನಿಯೋಜನೆಗೊಂಡಿದ್ದರೆಂದು ರಾಗಿಣಿ ಪ್ರಸ್ತಾಪಿಸಿದರು. ಅದರ ನಂತರ ನಡೆದ ಘಟನೆಯನ್ನು ವಿವರಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.