South India's No.1 Digital Mobile Paper
LIVE
Welcome to Smacy Media

Bail Trailer: ಕಾನೂನಿನ ಸುತ್ತ ಸಾಗುವ ʼಬೇಲ್‌ʼ: ಖಾಕಿ ತೊಟ್ಟು ಅಖಾಡಕ್ಕಿಳಿದ ಶಿವಣ್ಣ.!

Bail Trailer: ಕಾನೂನಿನ ಸುತ್ತ ಸಾಗುವ ʼಬೇಲ್‌ʼ: ಖಾಕಿ ತೊಟ್ಟು ಅಖಾಡಕ್ಕಿಳಿದ ಶಿವಣ್ಣ.!

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ (Shiva Rajkumar) ಅಭಿನಯದ ಬಹುನಿರೀಕ್ಷಿತ 'ಬೇಲ್' (Bail) ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ.

ಹಾಡು ಹಾಗೂ ಪೋಸ್ಟರ್‌ಗಳಿಂದ ಸಖತ್‌ ಸೌಂಡ್‌ ಮಾಡುತ್ತಿದ್ದ ಪವನ್ ಒಡೆಯರ್ (Pavan Wadeyar) ನಿರ್ದೇಶನ ಚಿತ್ರ, ಈಗ ಟ್ರೇಲರ್‌ ರಿಲೀಸ್‌ ಮಾಡ ಕುತೂಹಲ ಹೆಚ್ಚಿಸಿದೆ.

ಟ್ರೇಲರ್‌ನಲ್ಲಿ ಏನಿದೆ?:

"ನ್ಯಾಯವೇ...? ಅದು ನಿಮಗೆ ಪರಲೋಕದಲ್ಲಿ ಸಿಗುತ್ತದೆ; ಈ ಲೋಕದಲ್ಲಿರುವುದು ಕಾನೂನುʼʼ ಎನ್ನುವ ಹಿನ್ನೆಲೆ ಧ್ವನಿಯೊಂದಿಗೆ ಟ್ರೇಲರ್‌ ಆರಂಭವಾಗುತ್ತದೆ.

160 ಜನರ ಮಾರಣ ಹೋಮ, 300 ಜನ ಗಾಯಾಳುಗಳು, ಭಯದಲ್ಲಿರುವ ರಾಜಧಾನಿ ಬೆಂಗಳೂರು, ಎನ್ನುವ ಹಿನ್ನೆಲೆ ಧ್ವನಿಯಲ್ಲಿ ಟ್ರೇಲರ್‌ ಶುರುವಾಗುತ್ತದೆ.

ಆ ಬಳಿಕ ಪೊಲೀಸ್‌ ಆಗಿರುವ ಶಿವರಾಜ್‌ ಕುಮಾರ್ ಅವರ ಪಾತ್ರವನ್ನು ಪರಿಚಯ ಮಾಡಲಾಗಿದೆ.

ತನ್ನ ಮನೆಯ ಹೆಣ್ಣು ಮಕ್ಕಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಕಣ್ಣೀರಿಡುತ್ತಿರುವ ಕುಟುಂಬ ಒಂದು ಕಡೆಯಾದರೆ, ಇನ್ನೊಂದು ಕಡೆ ಕಟುಕರ ಅಟ್ಟಹಾಸವನ್ನು ಮಟ್ಟಹಾಕಲು ಸಂಚು ರೂಪಿಸುವ ಪೊಲೀಸ್‌ ಬುದ್ಧಿವಂತಿಕೆಯ ಎಳೆಯನ್ನು ತೋರಿಸಲಾಗಿದೆ.

📍 Karnataka
📰 Udayavani
🕒 2 days ago

Related News

ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
Today's Motivation
Today's Motivation
Back
Post Ad
To Ads