South India's No.1 Digital Mobile Paper
LIVE
Welcome to Smacy Media

'ಎಸ್‌ಐಆರ್' ಎಂದರೆ ಮತದಾರರ 'ಶಾ ಪ್ರೇರಿತ ವಜಾಗೊಳಿಸುವಿಕೆ': ಕಾಂಗ್ರೆಸ್ ಗಂಭೀರ ಆರೋಪ

'ಎಸ್‌ಐಆರ್' ಎಂದರೆ ಮತದಾರರ 'ಶಾ ಪ್ರೇರಿತ ವಜಾಗೊಳಿಸುವಿಕೆ': ಕಾಂಗ್ರೆಸ್ ಗಂಭೀರ ಆರೋಪ

ನವದೆಹಲಿ: ಚುನಾವಣಾ ಆಯೋಗವು ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ ಬೃಹತ್ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿರುವುದನ್ನು ಕಾಂಗ್ರೆಸ್ ಭಾನುವಾರ ತೀವ್ರವಾಗಿ ಖಂಡಿಸಿದೆ.

'ಎಸ್‌ಐಆರ್' (SIR) ಎಂದರೆ Shah Instigated Removal (ಶಾ ಪ್ರೇರಿತ ವಜಾಗೊಳಿಸುವಿಕೆ ) ಇದು ಸಂವಿಧಾನದ ಮೇಲಿನ ನೇರ ದಾಳಿ ಎಂದು ಆರೋಪಿಸಿದೆ.

ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯಿಂದ ಬೃಹತ್ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಹೀಗೆ ವಜಾಗೊಂಡವರಲ್ಲಿ ಹೆಚ್ಚಿನವರು ಸಮಾಜದ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಾಗೂ ವಂಚಿತ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆಯ ಮೊದಲ ಹಂತವನ್ನು 2025ರ ಜೂನ್‌ನಲ್ಲಿ ಬಿಹಾರದಲ್ಲಿ ಪ್ರಾರಂಭಿಸಿತು. ತದನಂತರ ಎರಡನೇ ಹಂತವನ್ನು 2025ರ ನವೆಂಬರ್‌ನಲ್ಲಿ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಯಿತು ಎಂದು ವಿವರಿಸಿದರು. ಈ ಮೊದಲ ಎರಡು ಹಂತಗಳಲ್ಲೇ ಒಟ್ಟು 7.8 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು. ಈ ವಜಾ ಪ್ರಮಾಣವು ಮೂಲ ಮತದಾರರ ಪಟ್ಟಿಯ ಶೇ. 13 ರಷ್ಟಿದೆ ಎಂದು ಅವರು ಅಂಕಿಅಂಶ ನೀಡಿದ್ದಾರೆ.

2026ರ ಮಧ್ಯಭಾಗದಲ್ಲಿ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಹಂತದ ಪ್ರಕ್ರಿಯೆ ಆರಂಭಗೊಂಡಿದೆ. ಈಗ ನಡೆಯುತ್ತಿರುವ ಈ ಮೂರನೇ ಹಂತದಲ್ಲಿ ಲಭ್ಯವಿರುವ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ದತ್ತಾಂಶದ ಪ್ರಕಾರ, ಒಟ್ಟು 36.06 ಕೋಟಿ ಮತದಾರರಲ್ಲಿ ಭಾರಿ ಪ್ರಮಾಣದ ಅಂದರೆ 6.18 ಕೋಟಿ ಮತದಾರರ ಹೆಸರುಗಳನ್ನು ವಜಾಗೊಳಿಸಲಾಗಿದೆ. ಅಂದರೆ ಇಲ್ಲಿ ವಜಾ ಪ್ರಮಾಣ ಶೇಕಡಾ 17 ಕ್ಕಿಂತ ಹೆಚ್ಚಾಗಿದೆ.

ಇದಷ್ಟೇ ಅಲ್ಲದೆ, ಹೆಚ್ಚುವರಿಯಾಗಿ 5.43 ಕೋಟಿ ಮತದಾರರಿಗೆ ತಮ್ಮ ಹೆಸರುಗಳನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲು ಹೆಚ್ಚುವರಿ ದಾಖಲೆಗಳನ್ನು ಒದಗಿಸುವಂತೆ ನೋಟಿಸ್ ನೀಡಲಾಗಿದೆ. ಇದರಿಂದಾಗಿ ಇನ್ನಷ್ಟು ಶೇಕಡಾ 15 ರಷ್ಟು ಮತದಾರರು ತಮ್ಮ ಹೆಸರುಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಇಷ್ಟೊಂದು ಭಾರಿ ಪ್ರಮಾಣದಲ್ಲಿ ಹೆಸರುಗಳು ವಜಾಗೊಳ್ಳುತ್ತಿರುವುದು ಸಂಪೂರ್ಣ ಎಸ್‌ಐಆರ್ ಪ್ರಕ್ರಿಯೆಯಲ್ಲೇ ಇರುವ ರಚನಾತ್ಮಕ ಲೋಪಗಳನ್ನು ತೋರಿಸುತ್ತದೆ ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.

ಇಷ್ಟೊಂದು ದೊಡ್ಡ ಮಟ್ಟದ ವಜಾ ಪ್ರಕ್ರಿಯೆಯ ನಂತರವೂ ಇಷ್ಟೊಂದು ಲಕ್ಷಾಂತರ ಮತದಾರರನ್ನು ಮತ್ತೆ "ಪರಿಶೀಲನೆ"ಗೆ ಒಳಪಡಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

📍 Karnataka
📰 Udayavani
🕒 2 days ago

Related News

ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
Today's Motivation
Today's Motivation
Back
Post Ad
To Ads