South India's No.1 Digital Mobile Paper
LIVE
Welcome to Smacy Media

ನಾಯಕರ ಮೇಲೆ ಇ.ಡಿ ದಾಳಿ: ಬಿಜೆಪಿ ಕ್ರಮ ಖಂಡಿಸಿ DC ಕಚೇರಿ ಮುಂದೆ ಪ್ರತಿಭಟನೆ

ನಾಯಕರ ಮೇಲೆ ಇ.ಡಿ ದಾಳಿ: ಬಿಜೆಪಿ ಕ್ರಮ ಖಂಡಿಸಿ DC ಕಚೇರಿ ಮುಂದೆ ಪ್ರತಿಭಟನೆ

ಬೆಳಗಾವಿ: ‘ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಸೇರಿದ ನಾಯಕರನ್ನು ಗುರಿಯಾಗಿಸಿಕೊಂಡು ಇ.ಡಿ, ಐಟಿ ದಾಳಿ ನಡೆಸುತ್ತಿರುವ ಬಿಜೆಪಿಯವರ ಕ್ರಮ ಖಂಡಿಸಿ, ಅಕ್ಟೋಬರ್ 12ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಶಾಮರಾವ್ ಘಾಟಗೆ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಜಾರಿ ನಿರ್ದೇಶನಾಲಯದವರು (ಇ.ಡಿ) ದಾಳಿ ನಡೆಸಿದ್ದಾರೆ. ಇದೇ ರೀತಿ ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟ ಸಮುದಾಯಗಳಿಗೆ ನಾಯಕರ ಮೇಲೆ ದಾಳಿ ಮಾಡಲಾಗಿದೆ. ತನಿಖಾ ಸಂಸ್ಥೆಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ಅದರಲ್ಲೂ ಕಾಂಗ್ರೆಸ್‌ನ ನಾಯಕರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿರುವ ವಿದ್ಯಮಾನಗಳು, ಬಿಜೆಪಿ ಪರಿಶಿಷ್ಟ ವಿರೋಧಿ ನೀತಿ ಎತ್ತಿ ತೋರಿಸುತ್ತವೆ. ಹಾಗಾಗಿ ಅಕ್ಟೋಬರ್‌ 12ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದರು.

📍 Karnataka
📰 Prajavani
🕒 2 days ago

Related News

ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
Today's Motivation
Today's Motivation
Back
Post Ad
To Ads