INDvsAFG: ಸ್ಫೋಟಕ ಶತಕದೊಂದಿಗೆ ಹಲವು ದಾಖಲೆ ಮುರಿದ ಅಭಿಷೇಕ್ ಶರ್ಮಾ
ಹೊಸದಿಲ್ಲಿ: ಭಾರತದ ಟಿ20ಐ ತಂಡದ ಸ್ಪೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಅಫ್ಘಾನಿಸ್ತಾನ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ ಅಭಿಷೇಕ್ ವಿಶ್ವ ದಾಖಲೆ ಬರೆದರು.
ಒಟ್ಟು 34 ಎಸೆತ ಎದುರಿಸಿದ ಅಭಿಷೇಕ್ 108 ರನ್ ಬಾರಿಸಿದರು. ಈ ವೇಳೆ ಅವರು 9 ಬೌಂಡರಿ ಮತ್ತು 11 ಸಿಕ್ಸರ್ ಚಚ್ಚಿದರು. 317.65ರ ಸ್ಟ್ರೈಕ್ ರೇಟ್ ನಲ್ಲಿ ಶರ್ಮಾ ಬ್ಯಾಟ್ ಬೀಸಿದರು.
ಅಭಿಷೇಕ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನವು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದಿದ್ದ ಹಲವು ಬ್ಯಾಟಿಂಗ್ ದಾಖಲೆಗಳನ್ನು ಮುರಿಯಿತು.
ಟಿ20ಐ ನಲ್ಲಿ ಭಾರತೀಯನೊಬ್ಬನ ವೇಗದ ಶತಕ
30 ಎಸೆತಗಳಲ್ಲಿ ಶತಕ ಬಾರಿಸಿದ ಅಭಿಷೇಕ್, ಮಾಜಿ ನಾಯಕ ರೋಹಿತ್ ಶರ್ಮಾ ಅವರ ಒಂಬತ್ತು ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು (2017 ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳು) ಮುರಿದರು.
ಪೂರ್ಣ-ಸದಸ್ಯ (ಐಸಿಸಿ ಟೆಸ್ಟ್) ರಾಷ್ಟ್ರಗಳ ಪೈಕಿ ಅತ್ಯಂತ ವೇಗದ ಟಿ20ಐ ಶತಕ
ಜಿಂಬಾಬ್ವೆಯ ಸಿಕಂದರ್ ರಾಜಾ ಮತ್ತು ನ್ಯೂಜಿಲೆಂಡ್‌ನ ಫಿನ್ ಅಲೆನ್ ಹೊಂದಿದ್ದ 33 ಎಸೆತಗಳ ಹಿಂದಿನ ದಾಖಲೆಯನ್ನು ಶರ್ಮಾ ಮೀರಿದರು.
30 - ಅಭಿಷೇಕ್ ಶರ್ಮಾ (ಭಾರತ), ಅಫ್ಘಾನಿಸ್ತಾನ ವಿರುದ್ಧ, ದೆಹಲಿ, 2026
33 - ಸಿಕಂದರ್ ರಾಜಾ (ಜಿಂಬಾಬ್ವೆ), ಗ್ಯಾಂಬಿಯಾ ವಿರುದ್ಧ, ನೈರೋಬಿ (ರುವಾರಕ), 2024
33 - ಫಿನ್ ಅಲೆನ್ (ದಕ್ಷಿಣ ಆಫ್ರಿಕಾ), ನ್ಯೂಜಿಲೆಂಡ್ ವಿರುದ್ಧ, ಕೋಲ್ಕತ್ತಾ, 2026
ಪುರುಷರ ಟಿ20ಐ ಇತಿಹಾಸದಲ್ಲಿ ಮೂರನೇ ಅತಿ ವೇಗದ ಶತಕ
ಅಂತಾರಾಷ್ಟ್ರೀಯ ಮಟ್ಟದ ಸಾರ್ವಕಾಲಿಕ ಅತಿವೇಗದ ಟಿ20ಐ ಶತಕಗಳ ಪಟ್ಟಿಯಲ್ಲಿ, ಎಸ್ಟೋನಿಯಾದ ಸಾಹಿಲ್ ಚೌಹಾಣ್ (27 ಎಸೆತಗಳು) ಮತ್ತು ಟರ್ಕಿಯ ಮುಹಮ್ಮದ್ ಫಹಾದ್ (29 ಎಸೆತಗಳು) ನಂತರ ಅಭಿಷೇಕ್ ಸ್ಥಾನ ಪಡೆದರು.
27 - ಸಾಹಿಲ್ ಚೌಹಾಣ್ (ಎಸ್ಟೋನಿಯಾ), ಸೈಪ್ರಸ್ ವಿರುದ್ಧ, ಎಪಿಸ್ಕೋಪಿ, 2024
29 - ಮುಹಮ್ಮದ್ ಫಹಾದ್ (ಟರ್ಕಿ), ಬಲ್ಗೇರಿಯಾ ವಿರುದ್ಧ, ಸೋಫಿಯಾ, 2025