South India's No.1 Digital Mobile Paper
LIVE
Welcome to Smacy Media

ಕಲ್ಯಾಣ ಕರ್ನಾಟಕ ಉತ್ಸವ: 10 ಅಂಶಗಳ ಅಭಿವೃದ್ಧಿ ನೀಲನಕ್ಷೆ‌ ಬಿಚ್ಚಿಟ್ಟ ಡಿಕೆಶಿ

ಕಲ್ಯಾಣ ಕರ್ನಾಟಕ ಉತ್ಸವ: 10 ಅಂಶಗಳ ಅಭಿವೃದ್ಧಿ ನೀಲನಕ್ಷೆ‌ ಬಿಚ್ಚಿಟ್ಟ ಡಿಕೆಶಿ

ಕಲಬುರಗಿ: ಹೈದರಾಬಾದ್ ‌ಕರ್ನಾಟಕ‌ ಪ್ರದೇಶವು ರಾಜ‌ಸತ್ತೆಯಿಂದ ಪ್ರಜಾಸತ್ತೆಗೆ ಸೇರ್ಪಡೆಯಾದ ಸ್ಮರಣಾರ್ಥ ‌ಆಚರಿಸಲಾಗುವ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ‌ ರಾಷ್ಟ್ರದ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ‌ಡಿ.ಕೆ.ಶಿವಕುಮಾರ್, ಕಲ್ಯಾಣ ಅಭಿವೃದ್ಧಿಗೆ ‌ಹತ್ತು ಅಂಶಗಳ ನೀಲನಕ್ಷೆ ಬಿಚ್ಚಿಟ್ಟರು.
ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್:
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡಲು ಸರ್ಕಾರವು ಸೆಕ್ಷನ್-8 ಕಂಪನಿ ಸ್ಥಾಪನೆಗೆ ಅನುಕೂಲ ಕಲ್ಪಿಸಲು ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಸ್ಥಾಪಿಸಲಿದೆ. ಈ ಮಿಷನ್ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಈ ಪ್ರದೇಶದಲ್ಲಿ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದು ಶಿವಕುಮಾರ್ ಹೇಳಿದರು.

ಜೈವಿಕ ಆರ್ಥಿಕ ಮಿಷನ್:
ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ಸರ್ಕಾರವು ಜೈವಿಕ ಆರ್ಥಿಕ ಮಿಷನ್ ಅನುಷ್ಠಾನಕ್ಕೆ ತರಲಿದೆ. ಈ‌ ಮೂಲಕ ತೊಗರಿ ಬೇಳೆ, ಕಮಲಾಪುರ ಕೆಂಪು ಬಾಳೆಹಣ್ಣು, ಒಣದ್ರಾಕ್ಷಿ ಮತ್ತು ಸಿರಿಧಾನ್ಯಗಳು ಸೇರಿದಂತೆ ಈ ಪ್ರದೇಶದ ಪ್ರಮುಖ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಇದು ಒತ್ತು ನೀಡಲು‌ ಉದ್ದೇಶಿಸಲಾಗಿದೆ ಎಂದರು.

📍 Karnataka
📰 Prajavani
🕒 5 days ago

Related News

ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
Today's Motivation
Today's Motivation
Back
Post Ad
To Ads