South India's No.1 Digital Mobile Paper
LIVE
Welcome to Smacy Media

Bengaluru Rain: ಒಂದೇ ತಾಸಿನ ಭಾರಿ ಮಳೆಗೆ ರಾಜಧಾನಿ ಅಸ್ತವ್ಯಸ್ತ

Bengaluru Rain: ಒಂದೇ ತಾಸಿನ ಭಾರಿ ಮಳೆಗೆ ರಾಜಧಾನಿ ಅಸ್ತವ್ಯಸ್ತ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಕಾದು ಕೆಂಡವಾಗಿದ್ದ ರಾಜಧಾನಿ ಬೆಂಗಳೂರಿಗೆ ಮಂಗಳವಾರ ವರುಣ ತಂಪೆರೆದ. ಹಲವು ದಿನಗಳ ನಂತರ ಸಂಜೆ ಏಕಾಏಕಿ ಶುರುವಾದ ವರುಣನ ಆರ್ಭಟ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ಸಂಚಾರ ಅಸ್ತವ್ಯಸ್ತವಾಗಿ ಬೆಂಗಳೂರಿನ ಹೃದಯಭಾಗದ ಪ್ರದೇಶ ಅಸ್ತವ್ಯಸ್ತವಾಗಿದ್ದವು.

ಕಚೇರಿ ಮುಗಿಸಿ ಮನೆಯತ್ತ ಮುಖ ಮಾಡಿದವರು ಮಳೆ ಆರ್ಭಟಕ್ಕೆ ಸಿಲುಕಿ ಬಸ್‌ ನಿಲ್ದಾಣ ಸೇರಿ ವಿವಿಧ ಅಂಗಡಿ ಮುಂ ಗಟ್ಟು ಬಳಿ ಆಶ್ರಯಿಸಿದರು. ಹಲಸೂರಿನ ಟ್ರಿನಿಟಿ ಸರ್ಕಲ್‌ ಬಳಿ, ಸೋಮೇಶ್ವರ ಸರ್ಕಲ್‌ ಬಳಿ, ಬಿಟಿಎಂ ಲೇಟ್‌, ಡೇರಿ ಸರ್ಕಲ್‌, ಎಚ್‌.ಎಸ್‌.ಆರ್‌.ಲೇಔಟ್‌ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಅಪಾಯ ಸಂಭವಿ ಸಿಲ್ಲ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿ ಕಾರದ ಸಹಾಯವಾಣಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಗ್ಗು ಪ್ರದೇಶಗಳಿಗೆ ನೀರು
ವಿಧಾನಸೌಧ, ಶಿವಾಜಿ ನಗರ, ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೇಟ್‌, ಜಯನಗರ, ವಿಲ್ಸನ್‌ ಗಾರ್ಡನ್‌, ಎಂಜಿ ರಸ್ತೆ, ವಿವೇಕ ನಗರ, ಹಲಸೂರು, ಎಚ್‌.ಎ.ಎಲ್‌. ಕೋರಮಂಗಲ, ಎಚ್‌.ಎಸ್‌.ಆರ್‌.ಲೇಔಟ್‌, ಬೆಳ್ಳಂದೂರು, ವರ್ತೂರು, ಸರ್ಜಾಪುರ, ವೈಟ್‌ಫೀಲ್ಡ್, ಕೆ.ಆರ್‌. ಪುರಂ ಸೇರಿ ನಗರದ ಹಲವೆಡೆ ಭಾರೀ ಮಳೆ ಆಗಿದೆ.

ಹಲವು ಕಡೆ ನೀರು ನುಗ್ಗಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಅಲ್ಲದೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ಚರಂಡಿಯೊಳಗೆ ಕಸ ತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ರಸ್ತೆ ಮೇಲೆ ನೀರು ನಿಂತಿತ್ತು. ವಾಹನಗಳ ಸಂಚಾರಕ್ಕೆ ತೊಡಕಾಯಿತು. ಬೈಕ್‌ ಸವಾರರು ರಸ್ತೆ ಬದಿ ನಿಂತು ಅಂಗಡಿ ಮುಂಗಟ್ಟು ಆಶ್ರಯ ಪಡೆದರೆ, ಕಾರು ಸೇರಿ ಇತರೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು. ಇದರಿಂದಾಗಿ ಟ್ರಾಫಿಕ್‌ ಕೂಡ ಹೆಚ್ಚಾಯಿತು.

ಕುಸಿದ ಕಾಂಪೌಂಡ್‌ನ‌ಡಿ ಸಿಲುಕಿದ 4 ಹಸು ಸಾವು
ದೊಮ್ಮಲೂರಿನ ಮಿಲಿಟರಿ ಕಾಂಪೌಂಡ್‌ ಕುಸಿದು ಬಿದ್ದಿದ್ದು, 8 ಹಸು ಸಿಲುಕಿ 4 ಹಸು ಸಾವನ್ನಪ್ಪಿವೆ. ಸ್ಥಳಕ್ಕೆ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಹಳೆ ವಿಮಾನ ನಿಲ್ದಾಣದ ರಸ್ತೆಯಲ್ಲಿ ನಿಂತಿದ್ದ ನೀರು ತೆರವುಗೊಳಿಸಲಾಗಿದೆ.

ಜಲಾವೃತ ಮುನ್ನೆಚ್ಚರಿಕೆ
ಕೆ.ಆರ್‌. ಸರ್ಕಲ್‌ ಅಂಡರ್‌ಪಾಸ್‌ ಬಂದ್‌ ಭಾರೀ ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ ಬಂದ್‌ ಮಾಡಲಾಗಿತ್ತು. ಸಣ್ಣ ಮಳೆಗೂ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ ಜಲಾವೃತವಾಗುತ್ತೆ. ಈ ಹಿಂದೆಯೂ ಅಂಡರ್‌ಪಾಸ್‌ನಲ್ಲಿ ಮಳೆನೀರು ನಿಂತು ಸಾವುನೋವು ಸಂಭವಿಸಿತ್ತು. ಹೀಗಾಗಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಅಂಡರ್‌ಪಾಸ್‌ ಬಂದ್‌ ಮಾಡಿದ್ದರು. ಸಂಚಾರ ದಟ್ಟಣೆ ನಿಧಾನವಾ ಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಶ್ರಮಪಟ್ಟರು.

ಶಾಂತಿನಗರ ಸುತ್ತಮುತ್ತ ನೀರು ತೆರವು
ಕೇಂದ್ರ ನಗರ ಪಾಲಿಕೆಯ ಶಾಂತಿನಗರ ಸುತ್ತಮುತ್ತಲ ಜಂಕ್ಷನ್‌ಗಳಲ್ಲಿ ನೀರು ತುಂಬಿಹೋಗಿತ್ತು. ಜಂಕ್ಷನ್‌ಗಳಲ್ಲಿ ಮೊಣಕಾಲುದ್ದ ನೀರು ನಿಂತಿತ್ತು. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು, ಪಾಲಿಕೆ ಸಿಬ್ಬಂದಿ ಜಂಕ್ಷನ್‌ಗಳಲ್ಲಿ ನೀರು ನಿಂತ ಸ್ಥಳ ತೆರವುಗೊಳಿಸಿದರು. ಮೇಯೋಹಾಲ್‌ ಕೋರ್ಟ್‌ ಜಂಕ್ಷನ್‌, ಗರುಡಾ ಮಾಲ್‌ ಜಂಕ್ಷನ್‌, ಟ್ರಿನಿಟಿ ಸರ್ಕಲ್‌ ಜಂಕ್ಷನ್‌, ಅನಿಲ್‌ ಕುಂಬ್ಳೆ ಜಂ ಕ್ಷನ್‌,. ಯುಬಿ ಸಿಟಿ ಜಂಕ್ಷನ್‌, ಎಎಸ್‌ಸಿ ಸೆಂಟರ್‌(ಎಚ್‌ಎಎಲ್‌) ವಿಮಾನ ನಿಲ್ದಾಣ ಜಂಕ್ಷನ್‌, ಟಾನಿಕ್‌ ಜಂಕ್ಷನ್‌, ಜೆ.ಸಿ.ಕಚೇರಿ ಜಂಕ್ಷನ್‌ ಜಲಾವೃತ ವಾಗಿತ್ತು. ಪೊಲೀಸರು, ಕೇಂದ್ರ ನಗರ ಪಾಲಿಕೆ ಸಿಬ್ಬಂದಿ ರಸ್ತೆ, ಚರಂಡಿಗ ಇಕ್ಕೆಲ ಗಳಲ್ಲಿ ನಿಂತಿದ್ದ ನೀರು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಾರಪ್ಪನಪಾಳ್ಯದಲ್ಲಿ ಅತ್ಯಧಿಕ 5.4 ಸೆಂ.ಮೀ. ಮಳೆ ಪ್ರಮಾಣ ದಾಖ ಲು ಮಾರಪ್ಪನಪಾಳ್ಯದಲ್ಲಿ 5.4 ಸೆಂ.ಮೀ. ಮಳೆ ಆಗಿದ್ದು, ನಗರದಲ್ಲಿ ದಾಖಲಾದ ಅತ್ಯಧಿಕ ಮಳೆಯಾಗಿದೆ. ನಾಗಾಪುರ 4.7 ಸೆಂ.ಮೀ, ಸಂಪಂಗಿ ರಾಮನಗರ 4.4 ಸೆಂ.ಮೀ. ಆನೇಕಲ್‌ನ ಮುಗಳೂರು 3.9, ನಂದಿನಿ ಲೇಔಟ್‌ 3.8, ಗುಟ್ಟಹಳ್ಳಿ, ದಾಸರಹಳ್ಳಿ 3.1, ಬಸವನಗುಡಿ 2.8, ಶಿವನಗರ 2.7, ಬಾಗಲಗುಂಟೆ 2.7, ಜ್ಞಾನಭಾರತಿ 2.4, ಆಲೂರು 2.4, ಮಾದಾವರ 2.1, ಬಳ್ಳೂರು 2.1, ದೊರೆಸಾನಿಪಾಳ್ಯ 1.8, ಹೊಸ್ಕೂರು 1.8, ಕಾಟನ್‌ಪೇಟೆ 1.5 ಮಳೆ ಯಾ ಗಿ ದೆ.

ಹಲವು ಮೇಲ್ಸೇತುವೆಗಳ ಕೆಳಗೆ ನೀರು
ಹೆಬ್ಬಾಳದ ಫ್ಲೈಓವರ್‌ನ ಕೆಂಪೇಗೌಡ ಸರ್ವೀಸ್‌ ರಸ್ತೆ, ವೀರನ ಪಾಳ್ಯ ಸರ್ವಿಸ್‌ ರಸ್ತೆಗಳಲ್ಲಿ ನೀರು ತುಂಬಿ ಹೋಗಿತ್ತು. ಆರ್‌.ಟಿ.ನಗರದ ಸಿ.ಎಲ್‌ ಕ್ರಾಸ್‌ ರೋಡ್‌, ಚಾಮರಾಜಪೇಟೆ ಮಾರ್ಕೆಟ್‌ ಮೇಲ್ಸೇತುವೆ, ರಾಯನ್‌ ಸರ್ಕಲ್‌, ಪೀಣ್ಯಾ ಫ್ಲೈಓವರ್‌ಕೆಳಪ್ರದೇಶ, ಹಲಸೂರು ಸರ್ಕಲ್‌, ಕೋರ ಮಂಗಲ ರಿಂಗ್‌ ರೋಡ್‌, ಶಿವಾಜಿನಗರ, ಕೆ.ಜಿಹಳ್ಳಿ, ಮಡಿವಾಳ, ಬೊಮ್ಮನಹಳ್ಳಿ, ರೂಪೇನ ಅಗ್ರಹಾರ, ಸಿಲ್ಕ್ ಬೋರ್ಡ್‌ ಜಂಕ್ಷನ್‌, ಬಿಟಿಎಂ ಲೇಔಟ್‌, ಮೈಕೋ ಲೇಔಟ್‌, ನಾಗಾರ್ಜುನ ಜಂಕ್ಷನ್‌, ಜೆ.ಡಿ.ಮರ ಜಂಕ್ಷನ್‌, ಆಡುಗೋಡಿ ಜಂಕ್ಷನ್‌ ಸೇರಿ ಹಲವು ಮೇಲ್ಸೇತುವೆ ಕೆಳಗೆ ನೀರು ನಿಂತಿದ್ದರಿಂದ ಕೆರೆಯಂತೆ ಭಾಸವಾಗುತಿತ್ತು. ಸಂಚಾರ ಪೊಲೀಸರು, ಪಾಲಿಕೆ ಅಧಿಕಾರಿಗಳು ತೆರವು ಕಾರ್ಯ ನಡೆಸಿದರು.

📍 Karnataka
📰 Udayavani
🕒 7 days ago

Related News

ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
Today's Motivation
Today's Motivation
Back
Post Ad
To Ads