ಪಂಜಾಬ್ ವಿರುದ್ಧ ಕೊನೆಗೂ ಆರ್ಸಿಬಿ ತನ್ನ ಸೇಡು ತೀರಿಸಿಕೊಂಡಿದೆ. ನಿನ್ನೆ ಮಧ್ಯಾಹ್ನ ಚಂಡಿಗಡದಲ್ಲಿ ನಡೆದ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಹೊಸ ದಾಖಲೆ ಬರೆದಿದೆ. ಆರ್ಸಿಬಿ ಗೆಲುವಿಗೆ ಕನ್ನಡಿಗ ದೇವದತ್ತ ಪಡಿಕ್ಕಲ್ ಕೊಡುಗೆ ತುಂಬಾನೇ ಇದೆ. 35 ಬಾಲ್ ಎದುರಿಸಿದ ಪಡಿಕ್ಕಲ್, 174.29 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದರು. ಬರೋಬ್ಬರಿ 4 ಸಿಕ್ಸರ್, ಐದು ಬೌಂಡರಿಯೊಂದಿಗೆ 61 ರನ್ಗಳಿಸಿ ಹರ್ಪ್ರಿತ್ ಬ್ರಾರ್ಗೆ ವಿಕೆಟ್ ಒಪ್ಪಿಸಿದರು.
6, 6, 6, 6! ಆರ್ಸಿಬಿ ಗೆಲ್ಲಿಸಿಕೊಟ್ಟ ಕನ್ನಡಿಗ ಪಡಿಕ್ಕಲ್ ಏನಂದ್ರು? ಯಾರ ಸಹಾಯ ನೆನಪಿಗೆ ಬಂತು?
Source : Smacy News
2 months ago