Select Location
All Locations
State
Region
City / District
ಕರ್ನಾಟಕದಲ್ಲೂ SIR ಆತಂಕ.. ಕಾಂಗ್ರೆಸ್ ಪಾಳಯದಲ್ಲಿ ಕಳವಳ.. ಇವತ್ತು ಹೈ-ವೋಲ್ಟೇಜ್ ಸಭೆ

ಕರ್ನಾಟಕದಲ್ಲೂ SIR ಆತಂಕ.. ಕಾಂಗ್ರೆಸ್ ಪಾಳಯದಲ್ಲಿ ಕಳವಳ.. ಇವತ್ತು ಹೈ-ವೋಲ್ಟೇಜ್ ಸಭೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಚುನಾವಣೆ ಆಯೋಗದ ಎಸ್‌ಐಆರ್ (Special Intensive Revision/SIR) ವಿಚಾರ ಈಗ ಆಡಳಿತಾರೂಢ ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ತನ್ನ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗೆ ಎಲ್ಲಿ ಧಕ್ಕೆಯಾಗುತ್ತದೋ ಎಂಬ ಕಳವಳದಲ್ಲಿರುವ ಕೈಪಡೆ, ಇದನ್ನು ಎದುರಿಸಲು ಬೃಹತ್ ರಣವ್ಯೂಹ ರೂಪಿಸಲು ಸಜ್ಜಾಗಿದೆ. ಈ ಕುರಿತು ಚರ್ಚಿಸಲು ಇಂದು ಸಂಜೆ 4 ಗಂಟೆಗೆ ದೇವನಹಳ್ಳಿ ಸಮೀಪದ ಬ್ರಿಗೇಡ್ ಆರ್ಚರ್ಡ್ಸ್‌ನಲ್ಲಿ ರಾಜ್ಯ ಕಾಂಗ್ರೆಸ್‌ನ ಅತ್ಯಂತ ಮಹತ್ವದ ವಿಶೇಷ ಸಭೆ ಕರೆಯಲಾಗಿದೆ.

ಇದನ್ನೂ ಓದಿ:AI ಒಳ್ಳೆ ಉದ್ದೇಶಕ್ಕೆ ಬಳಸಬೇಕು -ರುಕ್ಮಿಣಿ ವಸಂತ್ ಆಕ್ರೋಶ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಸರ್ಕಾರದ ಸಚಿವರು, ಶಾಸಕರು, ಸಂಸದರು, ಕಳೆದ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ಕಡ್ಡಾಯವಾಗಿ ಪಾಲ್ಗೊಳ್ಳಲಿದ್ದಾರೆ.

ಸಭೆಯ ಪ್ರಮುಖ ಅಜೆಂಡಾಗಳು ಎಸ್‌ಐಆರ್ ಕುರಿತು ಚರ್ಚೆ: ಚುನಾವಣೆ ಆಯೋಗ ಜಾರಿಗೆ ತರುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಆಗಬಹುದಾದ ಬದಲಾವಣೆಗಳು ಮತ್ತು ಅದು ಪಕ್ಷದ ಮೇಲೆ ಬೀರಲಿರುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಕಾನೂನು ಹೋರಾಟ: ಬೇರೆ ರಾಜ್ಯಗಳಲ್ಲಿ ಎಸ್‌ಐಆರ್‌ನಿಂದ ಆದ ಬೆಳವಣಿಗೆಗಳನ್ನು ಗಮನಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಮುಂದೂಡುವಂತೆ ಅಥವಾ ಕಾಲಾವಧಿ ವಿಸ್ತರಿಸುವಂತೆ ಕೋರಿ ಕಾನೂನು ಹೋರಾಟ ನಡೆಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.


News First 18 hours ago
Home Flash News