ಸಮುದಾಯದ ಸಮಸ್ಯೆ ಎತ್ತುವಂತೆ ಮುಸ್ಲಿಂ ನಾಯಕರಿಗೆ ರಾಹುಲ್ ಕರೆ
ನವದೆಹಲಿ: ಮುಸ್ಲಿಂ ನಾಯಕರು ತಮ್ಮ ಸಮುದಾಯದ ಸಮಸ್ಯೆಗಳನ್ನು ಗಂಭೀರವಾಗಿ ಎತ್ತಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಪಕ್ಷದ ಅಲ್ಪಸಂಖ್ಯಾತ ಇಲಾಖೆಯ ಸಲಹಾ ಮಂಡಳಿಯ ಸಭೆಯಲ್ಲಿ ಈ ಕುರಿತು ಮಾತನಾಡಿದ ರಾಹುಲ್, ಮುಸ್ಲಿಮರ ವಿರುದ್ಧ ಅನ್ಯಾಯವಾದರೆ ಕೇವಲ ಅಲ್ಪಸಂಖ್ಯಾತ ಸದಸ್ಯರಾಗಿ ಅಲ್ಲ ಮುಸ್ಲಿಂ ಆಗಿ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ. ಅದೇ ರೀತಿ ದಲಿತರು, ಒಬಿಸಿ ಅಥವಾ ಇತರೆ ಸಾಮಾನ್ಯ ವರ್ಗದ ಮೇಲೆ ದಾಳಿ ನಡೆದರೆ ಆ ನಿರ್ದಿಷ್ಟ ಸಮುದಾಯದವರು ಸಮಸ್ಯೆಯನ್ನು ಎತ್ತಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಮುಸ್ಲಿಂ ಪದವನ್ನು ಬಳಕೆ ಮಾಡುವುದರಿಂದ ಹಿಂಜರಿಯಬಾರದು ಎಂಬುದು ರಾಹುಲ್ ಗಾಂಧಿ ಅವರ ಸ್ಪಷ್ಟ ಸಂದೇಶವಾಗಿತ್ತು. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಎಂಬ ಬದಲು ಅಲ್ಪಸಂಖ್ಯಾತರು ಎಂದು ಬಳಕೆ ಮಾಡುತ್ತಿದ್ದಾರೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
ಮತ ಕಳ್ಳತನ ವಿಷಯ ಪ್ರಸ್ತಾಪಿಸಿ ಪಶ್ಚಿಮ ಬಂಗಾಳದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯದಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಆದರೆ ಈಗ ಆಂದೋಲನಕ್ಕೆ ಕರೆ ನೀಡಿದ್ದಾರೆ ಎಂದು ಹೇಳಿದ್ದಾರೆ.