Select Location
All Locations
State
Region
City / District
IPL 2026: ಸಂಪೂರ್ಣ ಸಿಎಸ್‌ ಕೆ ತಂಡಕ್ಕೆ ದಂಡ ವಿಧಿಸಿದ ಐಪಿಎಲ್‌ ಮಂಡಳಿ

IPL 2026: ಸಂಪೂರ್ಣ ಸಿಎಸ್‌ ಕೆ ತಂಡಕ್ಕೆ ದಂಡ ವಿಧಿಸಿದ ಐಪಿಎಲ್‌ ಮಂಡಳಿ

ಅಹಮದಾಬಾದ್:‌ ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಈ ಬಾರಿ ನಿರಾಶಾದಾಯಕ ಸೀಸನ್‌ ಅನುಭವಿಸಿದೆ. ಆಡಿದ 14 ಪಂದ್ಯಗಳಲ್ಲಿ ಕೇವಲ ಆರು ಪಂದ್ಯ ಗೆದ್ದ ಸಿಎಸ್‌ ಕೆ 12 ಅಂಕದೊಂದಿಗೆ ಸೀಸನ್‌ ಮುಗಿಸಿದೆ. ಗುರುವಾರ ಅಂತಿಮ ಪಂದ್ಯದಲ್ಲಿ ಸಿಎಸ್‌ ಕೆ ತಂಡವು ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡದ ಎದುರು ಸೋಲನುಭವಿಸಿತು,.89 ರನ್‌ಗಳ ಸೋಲಿನ ಬಳಿಕ ರುತುರಾಜ್‌ ಗಾಯಕ್ವಾಡ್‌ ಬಳಗವು ಪ್ಲೇ-ಆಫ್ ರೇಸ್‌ನಿಂದ ಹೊರಬಿತ್ತು.

ಪಂದ್ಯದ ನಂತರ, ಐಪಿಎಲ್ ಆಡಳಿತ ಮಂಡಳಿಯು ಇಡೀ ಸಿಎಸ್‌ ಕೆ ತಂಡಕ್ಕೆ ಭಾರೀ ದಂಡವನ್ನು ಘೋಷಿಸಿತು. ಅಗತ್ಯವಿರುವ ಓವರ್-ರೇಟ್ ಕಾಯ್ದುಕೊಳ್ಳಲು ವಿಫಲವಾದ ಕಾರಣ ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಯಿತು. ಆದರೆ, ಇದು ಅವರ ಎರಡನೇ ಅಪರಾಧವಾಗಿದ್ದರಿಂದ, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಇಡೀ ತಂಡಕ್ಕೆ ದಂಡ ಹಾಕಲಾಗಿದೆ.

230 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ ತಂಡವು 13.4 ಓವರ್‌ ಗಳಲ್ಲಿ ಕೇವಲ 140 ರನ್‌ ಗೆ ಆಲೌಟಾಯಿತು. ಈ ಮೂಲಕ 89 ರನ್‌ ಅಂತರದ ಸೋಲು ಕಂಡಿತು. ರುತುರಾಜ್‌ ಗಾಯಕ್ವಾಡ್‌ಗೆ 24 ಲಕ್ಷ ರೂ. ದಂಡ ವಿಧಿಸಿದ್ದರೆ, ಉಳಿದ ತಂಡದ ಸದಸ್ಯರಿಗೆ ತಲಾ 6 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕೃತ ಪ್ರಕಟಣೆ ತಿಳಿಸಿದೆ.


Udayavani 2 days ago
Home Flash News