Select Location
All Locations
State
Region
City / District
IPL 2026: ಅಗ್ರ 2 ಸ್ಥಾನಕ್ಕೇರಲು ಹೈದರಾಬಾದ್‌ ಗೆ ಇದೆ ಅವಕಾಶ; ಹೀಗಿದೆ ಲೆಕ್ಕಾಚಾರ

IPL 2026: ಅಗ್ರ 2 ಸ್ಥಾನಕ್ಕೇರಲು ಹೈದರಾಬಾದ್‌ ಗೆ ಇದೆ ಅವಕಾಶ; ಹೀಗಿದೆ ಲೆಕ್ಕಾಚಾರ

ಹೈದರಾಬಾದ್:‌ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಶುಕ್ರವಾರ (ಮೇ 22) ಮುಖಾಮುಖಿಯಾಗಲಿದೆ. ಎರಡೂ ತಂಡಗಳು ಈಗಾಗಲೇ ಪ್ಲೇ ಆಫ್‌ ಗೆ ಅರ್ಹತೆ ಪಡೆದಿದ್ದು, ಟಾಪ್‌ 2 ಸ್ಥಾನದ ರೇಸ್‌ ಮಾತ್ರ ಉಳಿದಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಭರ್ಜರಿಯಾಗಿ ಗೆದ್ದ ಗುಜರಾತ್‌ ಟೈಟಾನ್ಸ್‌ ತಂಡವು ಈಗಾಗಲೇ ಟಾಪ್‌ 2 ಸ್ಥಾನ ಖಾತ್ರಿ ಪಡಿಸಿಕೊಂಡಿದೆ. ಅಗ್ರ 2ರಲ್ಲಿ ಉಳಿದ ಮತ್ತೊಂದು ಸ್ಥಾನಕ್ಕಾಗಿ ಬೆಂಗಳೂರು – ಹೈದರಾಬಾದ್‌ ತಂಡಗಳು ಶುಕ್ರವಾರ ಪೈಪೋಟಿ ನಡೆಸಲಿದೆ.

13ರಲ್ಲಿ 9 ಪಂದ್ಯ ಗೆದ್ದು 18 ಅಂಕ, +1.065 ಅಂಕ ನೆಟ್‌ರನ್‌ರೇಟ್‌ ಗಳಿಸಿರುವ ಆರ್‌ಸಿಬಿ, ಹೈದ್ರಾಬಾದ್‌ ವಿರುದ್ಧ ಗೆದ್ದರೆ ಆಗ ಅಂಕ 20ಕ್ಕೇರಲಿದ್ದು, ಆಗ ನೆಟ್‌ ರನ್‌ ರೇಟ್‌ ಲೆಕ್ಕಾಚಾರದ ಅಗತ್ಯವೂ ಇಲ್ಲ. ಹೀಗಾದರೆ ಅಗ್ರಸ್ಥಾನದಲ್ಲೇ ಉಳಿಯುವ ಆರ್‌ಸಿಬಿ, ಕ್ವಾಲಿಫೈಯರ್‌-1ರಲ್ಲಿ ಗೆದ್ದರೆ ನೇರವಾಗಿ ಫೈನಲ್‌ ಗೇರಲಿದೆ. ಕ್ವಾಲಿಫೈಯರ್‌-1ರಲ್ಲಿ ಸೋತರೂ ಕ್ವಾಲಿಫೈಯರ್‌-2ರಲ್ಲಿ ಗೆದ್ದು ಫೈನಲ್‌ಗೇರಲು ಅವಕಾಶವಿದೆ. ಸದ್ಯ 13ರಲ್ಲಿ 8 ಪಂದ್ಯ ಗೆದ್ದು 16 ಅಂಕ, +0.350 ಅಂಕದೊಂದಿಗೆ 3ನೇ ಸ್ಥಾನದಲ್ಲಿರುವ ಹೈದರಾಬಾದ್‌ ಆರ್‌ ಸಿಬಿ ವಿರುದ್ಧ ಬಲು ದೊಡ್ಡ ಅಂತರದಿಂದ ಗೆದ್ದಷ್ಟೇ ಅದು ಅಗ್ರ ಸ್ಥಾನಕ್ಕೇರಲಿದೆ.


Udayavani 2 days ago
Home Flash News