Peddi Trailer: ನಾನಾವತಾರಗಳಲ್ಲಿ ‘ಪೆದ್ದಿ’ ರಾಮ್‌ಚರಣ್
ರಾಮ್‌ಚರಣ್, ಶಿವರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ ಜೂನ್ 4ರಂದು ತೆರೆಕಾಣುತ್ತಿದೆ. ಸಿನಿಮಾದ ಟ್ರೇಲರ್ ಮುಂಬೈನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ‘ಪೆದ್ದಿ’ ಎಂಬ ಪಾತ್ರದಲ್ಲಿ ನಾನಾವತಾರಗಳಲ್ಲಿ ರಾಮ್‌ಚರಣ್ ನಟಿಸಿದ್ದಾರೆ. ಇದೊಂದು ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ಜಾನರ್‌ನ ಸಿನಿಮಾವಾಗಿದ್ದು, ನಾಯಕ ‘ಪೆದ್ದಿ’ ಬಹುಮುಖ ಪ್ರತಿಭೆಯ ಕ್ರೀಡಾಪಟು. ತನ್ನ ದೈಹಿಕ ಬಲದಿಂದಲೇ ಜೀವನೋಪಾಯ ಕಂಡುಕೊಂಡಿದ್ದಾನೆ. ಕ್ರಿಕೆಟ್ ಆಗಿರಲಿ, ಕುಸ್ತಿಯಾಗಿರಲಿ ಅಥವಾ ಓಟವಾಗಿರಲಿ ಎಲ್ಲೆಲ್ಲೂ ‘ಪೆದ್ದಿ’ಯದ್ದೇ ಸಾಮ್ರಾಜ್ಯ. ಈತನ ಸುತ್ತಲೇ ಚಿತ್ರದ ಕಥೆ ಇದೆ.
ರಾಮ್‌ಚರಣ್ ಅಥ್ಲೆಟಿಕ್ ಅವತಾರದಲ್ಲಿ ಮಿಂಚಿದ್ದಾರೆ. ಕ್ರಿಕೆಟ್ ಬ್ಯಾಟ್ ಬೀಸುವ ರೀತಿ, ಕುಸ್ತಿ ಅಖಾಡದಲ್ಲಿ ತೊಡೆ ತಟ್ಟುವ ರೀತಿ ಪ್ರೇಕ್ಷಕರನ್ನು ಸೆಳೆಯುವಂತಿದೆ. ನಾಯಕಿಯಾಗಿ ನಟಿಸಿರುವ ಜಾನ್ವಿ ಕಪೂರ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೆಂದು ಮತ್ತು ಬೊಮನ್ ಇರಾನಿ ಪಾತ್ರಗಳನ್ನು ಪರಿಚಯಿಸಲಾಗಿದೆ. ಸಿನಿಮಾಗೆ ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸವಿದ್ದು, ಆರ್. ರತ್ನವೇಲು ಛಾಯಾಚಿತ್ರಗ್ರಹಣವಿದೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವೃದ್ಧಿ ಸಿನಿಮಾಸ್ ಬ್ಯಾನರ್‌ನಡಿ ವೆಂಕಟ ಸತೀಶ್ ಕಿಲಾರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.