ಇಷ್ಟು ಸಖತ್ ಆಗಿ ಕ್ರಿಕೆಟ್ ಆಡ್ತಿದ್ರೂ, ಬೆಂಗಳೂರಿನಲ್ಲಿ ತನಗಿರೋ ಕಾಯಿಲೆ ಬಗ್ಗೆ ಹೇಳಿದ Virat Kohli!
Cricketer Virat Kohli On Imposter Syndrome: ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವಿರಾಟ್ ಕೊಹ್ಲಿ ಅವರು ಇಂದು ಕೂಡ ಟಾಪ್ ಲೆವೆಲ್ ಪ್ರದರ್ಶನವನ್ನು ಕೊಡುತ್ತಾರೆ. ಈಗ ಅವರು ತಮಗೆ ಇರುವ ಕಾಯಿಲೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ RCB ಇನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮಿತ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಅವರು ತಮಗಿರುವ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. 20 ವರ್ಷಗಳಿಂದ ಕ್ರಿಕೆಟ್ ಲೋಕದಲ್ಲಿ ಟಾಪ್ ಲೆವೆಲ್ ಪ್ರದರ್ಶನ ಕೊಟ್ಟರೂ ಈ ಸಮಸ್ಯೆ ಕಾಡಿತ್ತು ಎಂದು ಅವರು ಹೇಳಿದ್ದಾರೆ.
"ಕ್ರಿಕೆಟರ್ ಆಗಿ ನೀವು ಪ್ರಜ್ಞಾವಂತರಾಗಿ ಅಥವಾ ಕೀಳರಿಮೆಯ ಮಧ್ಯದ ಒಂದು ಲೈನ್‌ನಲ್ಲಿ ಓಡಾಡುತ್ತೀರಿ. ನೀವು ಮಾಡಿದ ಕೆಲಸ ನಿಮಗೆ ಸಾಕಾಗೋದಿಲ್ಲ. ಇಂಪೋಸ್ಟರ್ ಸಿಂಡ್ರಮ್ ಯಾವಾಗಲೂ ಇದ್ದೇ ಇರುತ್ತದೆ" ಎಂದು ಅವರು ಹೇಳಿದ್ದಾರೆ. "ಇಂದು ಕೂಡ, ನಾನು ನೆಟ್‌ಗೆ ಹೋದಾಗ ಹೊಸಬರು ಕ್ರಿಕೆಟ್ ನೋಡುತ್ತಿರುತ್ತಾರೆ ಎಂದು ಯೋಚನೆ ಮಾಡುತ್ತೇನೆ. ನಾನು ಕೆಟ್ಟದಾಗಿ ಆಡಿದರೆ, ಇಪ್ಪತ್ತು ವರ್ಷಗಳಿಂದ ಆಟ ಆಡುತ್ತಿರುವ ಆಟಗಾರ ಇವರೇನಾ ಎಂದುಕೊಳ್ತಾರೆ ಎಂದು ನಾನು ಯೋಚನೆ ಮಾಡ್ತೀನಿ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.