Select Location
All Locations
State
Region
City / District
ವಿವಾದಿತ ಭೋಜಶಾಲಾ ದೇವಾಲಯ ಎಂದ ಹೈಕೋರ್ಟ್: ನಮಾಜ್ ಮಾಡುವಂತಿಲ್ಲ

ವಿವಾದಿತ ಭೋಜಶಾಲಾ ದೇವಾಲಯ ಎಂದ ಹೈಕೋರ್ಟ್: ನಮಾಜ್ ಮಾಡುವಂತಿಲ್ಲ

ಭೋಪಾಲ್: ಭೋಜಶಾಲಾದಲ್ಲಿರುವ ವಿವಾದಿತ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಮೀಸಲಾಗಿರುವ ದೇವಾಲಯವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ(ಮೇ15) ಐತಿಹಾಸಿಕ ತೀರ್ಪು ನೀಡಿದೆ. "ನಾವು ಆ ಸ್ಥಳದಲ್ಲಿ ಹಿಂದೂ ಪೂಜೆಯ ನಿರಂತರತೆಯನ್ನು ಗಮನಿಸಿದ್ದೇವೆ, ಆದರೆ ಕಾಲಾನಂತರ ನಿಯಂತ್ರಿಸಲ್ಪಟ್ಟಿದ್ದರೂ ಸಹ, ಸ್ಥಳದ ಐತಿಹಾಸಿಕ ಸಾಹಿತ್ಯವು ರಾಜ ಭೋಜಕ್ಕೆ ಸಂಬಂಧಿಸಿದ ಸಂಸ್ಕೃತ ಕಲಿಕೆಯ ಕೇಂದ್ರವಾಗಿ ಸ್ಥಾಪನೆಯಾಗಿದೆ ಎಂದು ನಾವು ದಾಖಲಿಸಿದ್ದೇವೆ.ಇದು ಧಾರ್‌ನಲ್ಲಿ ಸರಸ್ವತಿ ದೇವಿಗೆ ಮೀಸಲಾಗಿರುವ ದೇವಾಲಯದ ಅಸ್ತಿತ್ವವನ್ನು ಸೂಚಿಸುತ್ತದೆ.ಆದ್ದರಿಂದ, ಈ ಪ್ರದೇಶದ ಧಾರ್ಮಿಕ ಸ್ವರೂಪವನ್ನು ವಾಗ್ದೇವಿ ಸರಸ್ವತಿಯ ದೇವಾಲಯದೊಂದಿಗೆ ಭೋಜಶಾಲೆ ಎಂದು ಪರಿಗಣಿಸಲಾಗಿದೆ" ಎಂದು ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದ್ದಾರೆ.

2003 ರಲ್ಲಿ ಎಎಸ್ಐ ಹೊರಡಿಸಿದ ಆಕ್ಷೇಪಾರ್ಹ ಆದೇಶದಂತೆ ಕೀರ್ಣದೊಳಗೆ ಹಿಂದೂಗಳ ಪೂಜಾ ಹಕ್ಕುಗಳನ್ನು ನಿರ್ಬಂಧಿಸಲಾಗಿತ್ತು ಮತ್ತು ಮುಸ್ಲಿಂ ಸಮುದಾಯಕ್ಕೆ ನಮಾಜ್ ಮಾಡಲು ಅವಕಾಶ ನೀಡಲಾಗಿತ್ತು.ಆ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯವು ತನ್ನ ಆದೇಶದಲ್ಲಿ, ವಿವಾದಿತ ಭೋಜಶಾಲ-ಕಮಲ್ ಮೌಲಾ ಮಸೀದಿ ಸ್ಥಳವು 1958 ರ ಕಾನೂನಿನ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದ್ದು, 1904 ಮಾರ್ಚ್ 18ರ ಹಿಂದಿನ ಸಂರಕ್ಷಿತ ಸ್ಥಾನಮಾನವನ್ನು ಹೊಂದಿದೆ ಎಂದು ಹೇಳಿದೆ. ಆದಾಗ್ಯೂ, ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ, ಧಾರ್ ಜಿಲ್ಲೆಯೊಳಗೆ ಸೂಕ್ತವಾದ ಭೂಮಿ ಹಂಚಿಕೆ ಅಥವಾ ಮಸೀದಿ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿದರೆ, ರಾಜ್ಯವು ಕಾನೂನಿನ ಪ್ರಕಾರ ಅರ್ಜಿಯನ್ನು ಪರಿಗಣಿಸಬಹುದು ಎಂದು ಹೇಳಿದೆ. ರಾಜ್ಯ ಸರಕಾರವು ಸಂಕೀರ್ಣದಲ್ಲಿ ಪೂಜೆಗೆ ಅನುಕೂಲವಾಗುವಂತೆ ಭದ್ರತೆ ಮತ್ತು ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.


Udayavani 9 days ago
Home Flash News