Select Location
All Locations
State
Region
City / District
ಸತತ 2 ಸೋಲಿನ ಬಳಿಕ ಆರ್‌ಸಿಬಿ, ಸತತ 4 ಗೆಲುವಿನಿಂದ ಕೆಕೆಆರ್ ಪ್ಲೇ ಆಫ್ ಚಾನ್ಸ್ ಬದಲಾಗಿದ್ದು ಹೇಗೆ?

ಸತತ 2 ಸೋಲಿನ ಬಳಿಕ ಆರ್‌ಸಿಬಿ, ಸತತ 4 ಗೆಲುವಿನಿಂದ ಕೆಕೆಆರ್ ಪ್ಲೇ ಆಫ್ ಚಾನ್ಸ್ ಬದಲಾಗಿದ್ದು ಹೇಗೆ?

ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ರೋಚಕ ಘಟ್ಟ ತಲುಪಿದೆ. ಪ್ರತಿ ತಂಡಕ್ಕೆ ಗೆಲುವು ಅನಿವಾರ್ಯವಾಗುತ್ತಿದೆ. ಒಂದು ಸಣ್ಣ ಎಡವಟ್ಟು ಕೂಡ ತಂಡವನ್ನು ಲೀಗ್‌ನಿಂದಲೇ ಹೊರಗೆ ದಬ್ಬುವ ಸಾಧ್ಯತೆ ಹೆಚ್ಚಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್‌ಸಿಬಿ ಸತತ 2 ಸೋಲು ಕಂಡು 3ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಸೋಲಿನಿಂ ಕಂಗೆಟ್ಟ ಕೆಕೆಆರ್ ಸತತ 4 ಗೆಲುವಿನ ಮೂಲಕ ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

ಲಖನೌ ವಿರುದ್ಧದ ಸೋಲಿನಿಂದ ಆರ್‌ಸಿಬಿ ಸತತ 2 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ನೆಟ್‌ ರನ್‌ರೇಟ್ +1.234 ಇರುವ ಕಾರಣ 3ನೇ ಸ್ಥಾನದಲ್ಲಿದೆ. ಸದ್ಯ ಪರಿಸ್ಥಿತಿಯಲ್ಲಿ ಆರ್‌‍ಸಿಬಿಗೆ ಇನ್ನೊಂದು ಗೆಲುವು ಅನಿವಾರ್ಯವಾಗಿದೆ. ಬಳಿಕ ಎಲ್ಲಾ ನೆಟ್ ರನ್‌ರೇಟ್ ಲೆಕ್ಕಾಚಾರ ನಡೆಯಲಿದೆ. ಆದರೆ 2 ಅಥವ ಅದಕ್ಕಿಂತ ಹೆಚ್ಚಿನ ಗೆಲುವು ಆರ್‌ಸಿಬಿ ತಂಡವನ್ನು ಯಾವುದೇ ಅಡೆ ತಡೆ ಇಲ್ಲದೆ ಪ್ಲೇ ಆಫ್ ಟಾಪ್ 2 ಸ್ಥಾನಕ್ಕೆ ಕೊಂಡೊಯ್ಯಲಿದೆ.

ಆರ್‌ಸಿಬಿ ತಂಡಕ್ಕೆ ಮುಂಬೈ ಇಂಡಿಯನ್ಸ್, ಕೆಕೆಆರ್, ಪಂಜಾಬ್, ಹಾಗೂ ಎಸ್ಆರ್‌ಹೆಚ್ ತಂಡಗಳ ವಿರುದ್ದ ಪಂದ್ಯ ಬಾಕಿ ಇದೆ. ನಾಲ್ಕು ಪಂದ್ಯದಲ್ಲಿ 1 ಗೆಲುವು ದಾಖಲಿಸಿದರೆ 14 ಅಂಕದೊಂದಿಗೆ ಆರ್‌ಸಿಬಿ ಪ್ರಯಾಸದಲ್ಲಿ ಪ್ಲೇ ಆಫ್ ಸಾಧ್ಯತೆ ಪಡೆಯಲಿದೆ. 14 ಅಂಕ ಪಡೆದರೆ ನೆಟ್ ರನ್ ರೇಟ್ ಆಧಾರದಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಕನಿಷ್ಠ 2 ಗೆಲುವು 16 ದೊಂದಿಗೆ ಪ್ಲೇ ಆಫ್ ಹಾದಿ ಸುಗಮಗೊಳಿಸಲಿದೆ.

ಪ್ರತಿ ಐಪಿಎಲ್ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ, ಗೆಲುವಿನ ಆಧಾರದಲ್ಲಿ ಪ್ಲೇ ಆಫ್ ಕಟ್ ಆಫ್ ಪಾಯಿಂಟ್ ನಿರ್ಧಾರವಾಗುತ್ತದೆ. ಈ ಬಾರಿ ಸದ್ಯದ ಪರಿಸ್ಥಿತಿ ನೋಡಿದರೆ ಕನಿಷ್ಠ 14 ಅಂಕ ಬೇಕೇ ಬೇಕು, 18 ಅಂಕ ಸಂಪಾದಿಸಿದರೆ ಹೆಚ್ಚಿನ ಆತಂಕವಿಲ್ಲದೆ ಪ್ಲೇ ಆಫ್ ಹಂತಕ್ಕೆ ಎಂಟ್ರಿಕೊಡಲು ಸಾಧ್ಯವಾಗಲಿದೆ.

ಕೆಕೆಆರ್ ಪ್ಲೇ ಆಫ್ ರೇಸ್‌ನಿಂದ ಬಹುತೇಕ ದೂರ ಉಳಿದಿತ್ತು. ಆದರೆ ಅಜಿಂಕ್ಯ ರಹಾನೆ ನಾಯಕತ್ವದ ತಂಡ ಸತತ 4 ಗೆಲುವು ದಾಖಲಿಸಿ 9 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನುಳಿದ 4 ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಒಟ್ಟು ಅಂಕ 17 ಆಗಲಿದೆ. ಈ ಮೂಲಕ ಕೆಕೆಆರ್ ಕೊನೆಯ ಅವಕಾಶ ಒಂದನ್ನು ಪಡೆಯುವ ಸಾಧ್ಯತೆ ಇದೆ.


Asianet News 1 hour ago
Home Flash News