ತನ್ನೊಂದಿಗೆ ತಾನೇ ಸಂಧಾನ ಮಾತುಕತೆ ನಡೆಸುತ್ತಿರುವ ಅಮೆರಿಕ: ಇರಾನ್ ವ್ಯಂಗ್ಯ
ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಇತ್ಯರ್ಥಗೊಳಿಸಲು ಸಂಧಾನ ಮಾತುಕತೆ ನಡೆಸಲಾಗುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಇರಾನ್ ವ್ಯಂಗ್ಯವಾಡಿದೆ. ಅಮೆರಿಕ ತನ್ನೊಂದಿಗೆ ತಾನೇ ಮಾತುಕತೆ ನಡೆಸುತ್ತಿದೆ ಎಂದು ಇರಾನ್ ಮಿಲಿಟರಿಯ ವಕ್ತಾರ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ ಎಂದು ಟ್ರಂಪ್ ಮಂಗಳವಾರ ಹೇಳಿಕೊಂಡಿದ್ದರು.
ಅಲ್ಲದೆ ಯುದ್ದವನ್ನು ಕೊನೆಗೊಳಿಸಲು 15 ಅಂಶಗಳ ಯೋಜನೆಯನ್ನು ರಚಿಸಿ ಇರಾನ್‌ಗೆ ಕಳುಹಿಸಿರುವುದಾಗಿ ಹೇಳಿದೆ.
ನಿಮ್ಮ ಆಂತರಿಕ ಸಂಘರ್ಷವು ನಿಮ್ಮೊಂದಿಗೆ ನೀವೇ ಮಾತುಕತೆ ನಡೆಸುವ ಹಂತಕ್ಕೆ ತಲುಪಿದೆಯೇ ಎಂದು ಇರಾನ್ ಸಶಸ್ತ್ರಪಡೆಯ ವಕ್ತಾರ ಇಬ್ರಾಹಿಂ ಝೋಲ್ಫಾಕರಿ ಹೇಳಿಕೆ ನೀಡಿದ್ದಾರೆ
ನಮ್ಮಂತಹ ಜನರು ನಿಮ್ಮೊಂದಿಗೆ ಎಂದಿಗೂ ಹೊಂದಿಕೆಯಾಗಲು ಸಾಧ್ಯವಿಲ್ಲ, ನಾವಿದನ್ನು ಹೇಳುತ್ತಲೇ ಬಂದಿದ್ದೇವೆ. ನಮ್ಮಂತವರಿಗೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಗುವುದಿಲ್ಲ. ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
15 ಅಂಶಗಳ ಪ್ರಸ್ತಾವನೆ ಮುಂದಿಟ್ಟ ಅಮೆರಿಕ...
ಏತನ್ಮಧ್ಯೆ ಪಶ್ಚಿಮ ಏಷ್ಯಾದಲ್ಲಿರುವ ಸಂಘರ್ಷವನ್ನು ಇತ್ಯರ್ಥಗೊಳಿಸಲು ಇರಾನ್‌ಗೆ 15 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿದ್ದಾರೆ.
ಪ್ರಸ್ತಾವನೆಯ ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.