ಎಂಎಸ್‌ಎಂಇ ಗಳಿಗೆ 20 ಲಕ್ಷದವರೆಗೂ ಅಡಮಾನ ರಹಿತ ಸಾಲ: ಸೈಬರ್ ವಂಚನೆಗಳಿಗೆ 25 ಸಾವಿರ ಪರಿಹಾರಕ್ಕೆ ಆರ್‌ಬಿಐ ಪ್ರಸ್ತಾಪ
ಆರ್‌ಬಿಐ ಇಂದು ದ್ವೈಮಾಸಿಕ ಹಣಕಾಸು ಸಮಿತಿಯ (MPC) ಸಭೆಯ ತೀರ್ಮಾನಗಳನ್ನು ಪ್ರಕಟಿಸಿದೆ. ರೆಪೋ ದರವನ್ನು 5.25% ಶೇ.ದಲ್ಲಿ ಇಳಿಕೆ ಮಾಡದೇ ಮುಂದುವರೆಯಲು ನಿರ್ಧರಿಸಿದೆ. ಡಿಸೆಂಬರ್‌ನಲ್ಲಿ ರೆಪೋ ದರವನ್ನು 5.5%ರಿಂದ 5.25%ಕ್ಕೆ ಇಳಿಸಲಾಗಿತ್ತು, ಈಗ ಹೆಚ್ಚಿನ ಬದಲಾವಣೆ ಮಾಡಿಲ್ಲ. ಇದರಿಂದ ಬ್ಯಾಂಕುಗಳು ಈಗಾಗಲೇ ಇಳಿಸಿದ ರೆಪೋ ಲಾಭವನ್ನು ಗ್ರಾಹಕರಿಗೆ ನೀಡಬೇಕು. ಕೆಲ ಬ್ಯಾಂಕುಗಳು ಗೃಹ ಸಾಲ, ವೈಯಕ್ತಿಕ ಸಾಲಗಳ ಬಡ್ಡಿದರವನ್ನು ಈಗಾಗಲೇ ಕಡಿಮೆ ಮಾಡಿವೆ.
ಆರ್‌ಬಿಐ ಸೈಬರ್ ವಂಚನೆಗಳಿಗೆ ಪರಿಹಾರ ನೀಡಲು ರೂ. 25,000 ವರೆಗೆ ವ್ಯವಸ್ಥೆ ಪರಿಚಯಿಸಿದೆ. ಜೊತೆಗೆ MSME ಗಾಗಿ ಸಾಲ ಮಿತಿಯನ್ನು ರೂ. 20 ಲಕ್ಷಕ್ಕೆ ಹೆಚ್ಚಿಸಿದ್ದು, ಅಡಮಾನ ರಹಿತ ಸಾಲಗಳನ್ನು ಸುಲಭಗೊಳಿಸುವ ಮೂಲಕ ಸಣ್ಣ ಉದ್ಯಮಗಳಿಗೆ ಸಹಾಯ ಮಾಡಲಿದೆ.
ಗ್ರಾಹಕರ ರಕ್ಷಣೆಯನ್ನು ಹೆಚ್ಚಿಸಲು, ಡಿಜಿಟಲ್ ಪಾವತಿ ಭದ್ರತೆಯನ್ನು ಸುಧಾರಿಸಲು ಮತ್ತು ಹಣಕಾಸು ಮಾರುಕಟ್ಟೆಯನ್ನು ಪ್ರಬಲಗೊಳಿಸಲು RBI ಹೊಸ ಮಾರ್ಗಸೂಚಿಗಳು ಮತ್ತು "Mission SAKSHAM" ಯೋಜನೆಯನ್ನು ಘೋಷಿಸಿದೆ. FY26 ಬೆಳವಣಿಗೆಯ ಮುನ್ಸೂಚನೆಯನ್ನು 7.3% ರಿಂದ 7.4%ಕ್ಕೆ ಹೆಚ್ಚಿಸಲಾಗಿದೆ ಎಂದು ಗವರ್ನರ್ ಮಲ್ಹೋತ್ರಾ ತಿಳಿಸಿದ್ದಾರೆ.