Mantralaya: ರಾಯರ ಮಠದಲ್ಲಿ ಕನ್ನಡ ಮಂತ್ರ, ತೆಲುಗಿನವರ ವಿರೋಧ: ಮಂತ್ರಾಲಯದಲ್ಲಿ ಭಾಷಾ ಸಂಘರ್ಷ ಶುರುವಾಗಿದ್ದು ಯಾಕೆ?
ರಾಯಚೂರು (ಡಿ.26): ಕರ್ನಾಟಕದ ರಾಯಚೂರಿನ (Raichuru) ಗಡಿಯಲ್ಲಿರುವ ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿ (Guru Raghavendra Swamy) ಮಠಕ್ಕೆ ಹೊರ ರಾಜ್ಯಗಳಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇಗುಲದ ಮುಂಭಾಗದಲ್ಲಿ ''ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ'' ಎಂಬ ಮಂತ್ರವನ್ನ (Mantra) ಕನ್ನಡದಲ್ಲಿ ಬರೆಯಲಾಗಿದೆ. ಈ ಮಂತ್ರವೇ ಈಗ ಭಾಷಾ ಸಂಘರ್ಷಕ್ಕೂ (Language Conflict) ಕಾರಣವಾಗಿದೆ.