India-New Zealand FTA: ಸಪ್ತ ಸಾಗರದಾಚೆಗೆ ಮೋದಿ ಮಾಡಿದ ಆ ಒಂದು ಕರೆಯಿಂದ ಭಾರತಕ್ಕೆ ಸಿಕ್ತು ಗುಡ್‌ನ್ಯೂಸ್, ರೈತರಿಗೆ ಬಂಪರ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಡಳಿತದ ಸುಂಕದ ಮಧ್ಯೆ ಭಾರತಕ್ಕೆ ಇದೀಗ ಮತ್ತೊಂದು ಬಲ ಸಿಕ್ಕಿದೆ. ಮುಕ್ತ ವ್ಯಾಪಾರ ಒಪ್ಪಂದ (FTA) ಕುರಿತು ಭಾರತ ಮತ್ತು ನ್ಯೂಜಿಲೆಂಡ್ (New Zealand) ನಡುವೆ ಮಹತ್ವದ ಒಪ್ಪಂದಕ್ಕೆ ಬರಲಾಗಿದೆ. ಇದರಿಂದ ರೈತರು ಮತ್ತು ಇತರ ವಲಯಗಳು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಭಾರತ-ನ್ಯೂಜಿಲೆಂಡ್ ಸಂಬಂಧಗಳಲ್ಲಿ ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ (Christopher Luxon) ದೂರವಾಣಿ ಸಂಭಾಷಣೆ ನಡೆಸಿದ್ದಾರೆ.