ವಿಷ್ಣುವರ್ಧನ್ ಜೊತೆ ನಟಿಸಿದ್ದ ಮಹಾಭಾರತದ ಕರ್ಣ ಕ್ಯಾನ್ಸರ್‌ನಿಂದ ನಿಧನ!
ಬೆಂಗಳೂರು (ಅ.15): ಡಾ. ವಿಷ್ಣುವರ್ಧನ್ ನಟಿಸಿದ್ದ ವಿಷ್ಣುಸೇನಾ ಸಿನಿಮಾದಲ್ಲಿ ಡಿಸಿಪಿ ಸಮರ್ಜಿತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್‌ನ ಖ್ಯಾತ ನಟ ಪಂಕಜ್ ಧೀರ್ ದೀರ್ಘಕಾಲದ ಕ್ಯಾನ್ಸರ್‌ನೊಂದಿಗಿನ ಹೋರಾಟದ ಬಳಿಕ ಮಂಗಳವಾರ ನಿಧನರಾದರು. ವಿಷ್ಣುಸೇನಾಗಿಂತಲೂ ಮುನ್ನ ಟಿವಿ ಧಾರವಾಹಿಯಾಗಿ ಭಾರೀ ಪ್ರಮಾಣದ ಮನ್ನಣೆ ಪಡೆದಿದ್ದ ಮಹಾಭಾರತದಲ್ಲಿ ಕರ್ಣ ಪಾತ್ರದ ಮೂಲಕ ಅವರು ಜನಮಾನಸದಲ್ಲಿ ಪ್ರಸಿದ್ಧರಾಗಿದ್ದರು.