ತಿರುಮಲದಲ್ಲಿ ದೀಪಾವಳಿ-ಪುಷ್ಪಯಾಗ ಸಂಭ್ರಮ: ಈ ದಿನ ಟಿಟಿಡಿ ಹಲವು ಆರ್ಜಿತ ಸೇವೆಗಳು ರದ್ದು!
ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರ ದಟ್ಟಣೆ ಮುಂದುವರಿದಿದ್ದು, ದೀಪಾವಳಿ ಮತ್ತು ಪುಷ್ಪಯಾಗ ಮಹೋತ್ಸವದ ಹಿನ್ನೆಲೆಯಲ್ಲಿ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸಿದೆ. ಈ ವಿಶೇಷ ಕಾರ್ಯಕ್ರಮಗಳಿಂದಾಗಿ ಹಲವು ಆರ್ಜಿತ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.