South India's No.1 Digital Mobile Paper
LIVE
Welcome to Smacy Media

ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ವಾಣಿಜ್ಯ ಒಪ್ಪಂದ ಮೇಲೆ ಪರಿಣಾಮ ಬೀರದು:

ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ವಾಣಿಜ್ಯ ಒಪ್ಪಂದ ಮೇಲೆ ಪರಿಣಾಮ ಬೀರದು:

ನವದೆಹಲಿ: ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶವು ಭಾರತ ಹಾಗೂ ಅಮೆರಿಕ ನಡುವಣ ಮಧ್ಯಂತರ ವಾಣಿಜ್ಯ ಒಪ್ಪಂದದ ಮೇಲೆ ಯಾವುದೇ ನೇರ ಪರಿಣಾಮ ಬಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಮುಖಭಂಗ ಉಂಟಾಗಿತ್ತು. ರಿಪಬ್ಲಿಕನ್ ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲೂ ಹಿನ್ನಡೆಯಾಗಿವೆ.

ಈ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಮೇಲೆ ನಿಯಂತ್ರಣ ಸಾಧಿಸಿದೆ.

ಭಾರತ–ಅಮೆರಿಕ ಮಧ್ಯಂತರ ವಾಣಿಜ್ಯ ಒಪ್ಪಂದಕ್ಕೆ ಅಮೆರಿಕದ ಸಂಸತ್ತಿನ ಕಡೆಯಿಂದ ಔಪಚಾರಿಕ ಅನುಮೋದನೆಯ ಅಗತ್ಯವಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಉಭಯ ದೇಶಗಳು ಈ ವರ್ಷದ ಫೆಬ್ರುವರಿಯಲ್ಲಿ ಒಪ್ಪಂದದ ಮೊದಲ ಹಂತದ ಚೌಕಟ್ಟನ್ನು ಅಂತಿಮಗೊಳಿಸಿದ್ದವು. ಆದರೆ, ಅಮೆರಿಕದ ಸುಂಕ ನೀತಿಯಲ್ಲಾದ ಬದಲಾವಣೆಗಳಿಂದಾಗಿ ಈ ಒಪ್ಪಂದದ ಕುರಿತು ಗೊಂದಲ ಉಂಟಾಗಿತ್ತು.

ಮಧ್ಯಂತರ ಚುನಾವಣಾ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿರುವ ಆರ್ಥಿಕ ಚಿಂತಕರ ಚಾವಡಿ 'ಜಿಟಿಆರ್‌ಐ', 'ಈ ಫಲಿತಾಂಶಗಳು ಟ್ರಂಪ್ ಅವರ ವಾಣಿಜ್ಯ ನೀತಿಯ ದಿಕ್ಕನ್ನು ಬದಲಾಯಿಸುವುದಿಲ್ಲ. ಏಕೆಂದರೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳು ಆರ್ಥಿಕ ರಾಷ್ಟ್ರೀಯತೆ, ದೇಶೀಯ ಉತ್ಪಾದನೆ ಮತ್ತು ಬಲವಾದ ಪೂರೈಕೆ ಸರಪಳಿಯನ್ನು ಬೆಂಬಲಿಸುತ್ತವೆ' ಎಂದಿದೆ.

'ಡೆಮಾಕ್ರಟಿಕ್ ಸಂಸದರು ಸಹ ಸ್ಥಳೀಯ ಕಾರ್ಮಿಕರ ರಕ್ಷಣೆಗಾಗಿ ಸುಂಕ ವಿಧಿಸುವುದನ್ನು ಬೆಂಬಲಿಸುವುದರಿಂದ, ಅಮೆರಿಕದ ಒಟ್ಟಾರೆ ವಾಣಿಜ್ಯ ನಿಲುವು ಹಾಗೆಯೇ ಮುಂದುವರಿಯಲಿದೆ' ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.

2025-26ರ ಸಾಲಿನಲ್ಲಿ ಅಮೆರಿಕವು ಭಾರತದ ಅತಿದೊಡ್ಡ ವಾಣಿಜ್ಯ ಪಾಲುದಾರ ದೇಶವಾಗಿತ್ತು. 'ನಾವು ಬಹುತೇಕ ಚರ್ಚೆಗಳನ್ನು ಮುಕ್ತಾಯಗೊಳಿಸಿದ್ದೇವೆ. ಒಪ್ಪಂದಕ್ಕೆ ಅಂತಿಮ ರೂಪ ನೀಡುತ್ತಿದ್ದೇವೆ' ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕಳೆದ ತಿಂಗಳು ಹೇಳಿಕೆ ನೀಡಿದ್ದರು.

📍 Chennai
📰 Prajavani
🕒 16 days ago

Related News

ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
⬅ Back
➕ Post Ad
To Ads ➡