South India's No.1 Digital Mobile Paper
LIVE
Welcome to Smacy Media

75ನೇ ಮಿಸ್ ಯೂನಿವರ್ಸ್ 2026:

75ನೇ ಮಿಸ್ ಯೂನಿವರ್ಸ್ 2026:

ನವದೆಹಲಿ: ಪ್ರತಿಷ್ಠಿತ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಕಾಜಿಯಾ ಲಿಜ್ ಮೆಜೊ ಅವರು ಪೋರ್ಟೊ ರಿಕೋಗೆ ಪ್ರಯಾಣ ಬೆಳೆಸಿದ್ದಾರೆ.

ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಪ್ರಯಾಣಕ್ಕೆ ಸಜ್ಜಾಗಿರುವ ಚಿತ್ರಗಳನ್ನು ಮಿಸ್ ಯೂನಿವರ್ಸ್ ಇಂಡಿಯಾ ಸಂಸ್ಥೆಯು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ವಿಮಾನ ನಿಲ್ದಾಣದಲ್ಲಿ ಕಡು ಕೆಂಪು (ಮರೂನ್) ಬಣ್ಣದ ಸಾಂಪ್ರದಾಯಿಕ ಸೀರೆ ಹಾಗೂ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಧರಿಸಿ ಕಾಜಿಯಾ ಮಿಂಚಿದ್ದಾರೆ.

ವಿಶ್ವವೇದಿಕೆಯಲ್ಲಿ 19 ವರ್ಷದ ಕೇರಳ ಸುಂದರಿ
ಕೇರಳ ಮೂಲದ 19 ವರ್ಷದ ಕಾನೂನು ವಿದ್ಯಾರ್ಥಿನಿಯಾಗಿರುವ ಕಾಜಿಯಾ ಲಿಜ್ ಮೆಜೊ, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕೇರಳದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2007ರಲ್ಲಿ ಜನಿಸಿದ ಇವರು ತಮ್ಮ ಬಾಲ್ಯವನ್ನು ಅಬುಧಾಬಿಯಲ್ಲಿ ಕಳೆದು, ಪ್ರಸ್ತುತ ಕಾನೂನು ಶಿಕ್ಷಣದ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 12 ವರ್ಷಗಳ ಕಾಲ ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡಿರುವ ಇವರು, ಗಾಯನ, ಪಿಟೀಲು ಹಾಗೂ ಡ್ರಮ್ಸ್ ಬಾರಿಸುವುದರಲ್ಲೂ ಪರಿಣತರಾಗಿದ್ದಾರೆ.

ಈ ಹಿಂದೆ 2024 ರಲ್ಲಿ 'ಮಿಸ್ ಟೀನ್ ದಿವ' ಕಿರೀಟ ಗೆದ್ದಿದ್ದ ಕಾಜಿಯಾ, 2025 ರ 'ಮಿಸ್ ಟೀನ್ ಇಂಟರ್ನ್ಯಾಷನಲ್' ಸ್ಪರ್ಧೆಯಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದರು. ಈ ವರ್ಷದ ಆರಂಭದಲ್ಲಿ 'ಮಿಸ್ ಯೂನಿವರ್ಸ್ ಕೇರಳ 2026' ಪಟ್ಟವನ್ನು ಗೆದ್ದು ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.

75ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸ್ಪರ್ಧೆಯು ಪೋರ್ಟೊ ರಿಕೋ ದೇಶದ ಸ್ಯಾನ್ ಜುವಾನ್ ನಗರದಲ್ಲಿರುವ 'ಜೋಸ್ ಮೈಕೆಲ್ ಅಗ್ರೆಲಾಟ್ ಕೊಲಿಸಿಯಂ'ನಲ್ಲಿ ನಡೆಯಲಿದ್ದು, ನವೆಂಬರ್ 24, 2026 ರಂದು ಅದ್ಧೂರಿ ಫೈನಲ್ ನಡೆಯಲಿದೆ. ಈ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ವಿಶ್ವದ ಸುಮಾರು 130 ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

📍 Bangalore Urban
📰 Udayavani
🕒 16 days ago

Related News

ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
⬅ Back
➕ Post Ad
To Ads ➡