Select Location
All Locations
State
Region
City / District
ಸನ್‌ರೈಸರ್ಸ್- ರಾಜಸ್ಥಾನ್ ನಡುವೆ ಎಲಿಮಿನೇಟರ್; ಯಾರಿಗೆ ಸಿಗಲಿದೆ ಕ್ವಾಲಿಫೈಯರ್ 2 ಟಿಕೆಟ್?

ಸನ್‌ರೈಸರ್ಸ್- ರಾಜಸ್ಥಾನ್ ನಡುವೆ ಎಲಿಮಿನೇಟರ್; ಯಾರಿಗೆ ಸಿಗಲಿದೆ ಕ್ವಾಲಿಫೈಯರ್ 2 ಟಿಕೆಟ್?

IPL 2026, SRH vs RR Eliminator: ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ಈ ಮಹತ್ವದ ಪಂದ್ಯದ ಮುನ್ನ, ಎರಡೂ ತಂಡಗಳ ಹೆಡ್-ಟು-ಹೆಡ್ ದಾಖಲೆಗಳು, ಮುಲ್ಲನ್‌ಪುರ ಪಿಚ್ ವರದಿ ಮತ್ತು ಹವಾಮಾನ ಮುನ್ಸೂಚನೆಯನ್ನು ಇಲ್ಲಿ ನೀಡಲಾಗಿದೆ. SRH ದಾಖಲೆ ಉತ್ತಮವಾಗಿದ್ದು, ಚೇಸಿಂಗ್‌ಗೆ ಅನುಕೂಲಕರವಾದ ಪಿಚ್‌ನಲ್ಲಿ ಹೈದರಾಬಾದ್ ಗೆಲ್ಲುವುದೇ ಅಥವಾ ರಾಜಸ್ಥಾನ ಅಚ್ಚರಿ ಮೂಡಿಸುವುದೇ ಕಾದು ನೋಡಬೇಕು.

ಮೇ 26 ರ ಮಂಗಳವಾರ ನಡೆದ ಐಪಿಎಲ್ 2026 (IPL 2026) ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವು ಸೋಲಿನ ಹೊರತಾಗಿಯೂ ಫೈನಲ್ ತಲುಪಲು ಇನ್ನೊಂದು ಅವಕಾಶವನ್ನು ಪಡೆದಿದೆ. ಅದಕ್ಕಾಗಿ ಗುಜರಾತ್ ಕ್ವಾಲಿಫೈಯರ್ 2 ಪಂದ್ಯವನ್ನು ಆಡಬೇಕಾಗುತ್ತದೆ. ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್​ಗೆ ಯಾರು ಎದುರಾಗುತ್ತಾರೆ ಎಂಬುದು ಇಂದು ಅಂದರೆ ಮೇ 27 ರಂದು ನಿರ್ಧಾರವಾಗುತ್ತದೆ. ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ (SRH vs RR) ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಹೆಡ್ ಟು ಹೆಡ್ ದಾಖಲೆ ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಹೈದರಾಬಾದ್ ಮತ್ತು ರಾಜಸ್ಥಾನ ನಡುವೆ ಒಟ್ಟು 3 ಪಂದ್ಯಗಳು ನಡೆದಿವೆ. ಈ 23 ಪಂದ್ಯಗಳಲ್ಲಿ ಹೈದರಾಬಾದ್ ಪ್ರಾಬಲ್ಯ ಸಾಧಿಸಿದೆ. ಹೈದರಾಬಾದ್ 14 ಪಂದ್ಯಗಳಲ್ಲಿ ರಾಜಸ್ಥಾನವನ್ನು ಸೋಲಿಸಿದೆ. ರಾಜಸ್ಥಾನ ಹೈದರಾಬಾದ್ ವಿರುದ್ಧ 9 ಪಂದ್ಯಗಳನ್ನು ಗೆದ್ದಿದೆ. ಇನ್ನು ಐಪಿಎಲ್ 2026 ರ ಲೀಗ್ ಹಂತದಲ್ಲಿ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ಎರಡು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಪಿಚ್ ವರದಿ ನವಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯಕ್ಕಾಗಿ ಪಿಚ್ ನಂ. 4 ಅನ್ನು ಬಳಸಲಾಗುವುದು. ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಲೀಗ್ ಹಂತದಲ್ಲಿ ಇದೇ ಪಿಚ್​ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಪಂಜಾಬ್ ನೀಡಿದ್ದ 223 ರನ್‌ಗಳ ಗುರಿಯನ್ನು ರಾಜಸ್ಥಾನ್ ಬೆನ್ನಟ್ಟಿ ಗೆದ್ದಿತ್ತು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 51 ರನ್ ಗಳಿಸಿದರೆ, ವೈಭವ್ 16 ಎಸೆತಗಳಲ್ಲಿ 43 ರನ್ ಗಳಿಸಿದರು.


TV9 Kannada 58 minutes ago
Home Flash News