... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಮೈಕೆಲ್ ಬಿ. ಜೋರ್ಡಾನ್ ಅತ್ಯುತ್ತಮ ನಟ,

Oscars 2026: ಮೈಕೆಲ್ ಬಿ. ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ

ಲಾಸ್ ಏಂಜಲೀಸ್: ವಿಶ್ವದ ಅತ್ಯಂತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯಾದ ಆಸ್ಕರ್ ಅಂಗಳದಲ್ಲಿ ಈ ಬಾರಿ ಹೊಸ ಇತಿಹಾಸ ಸೃಷ್ಟಿಯಾಗಿದೆ. 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ನಟ ಮೈಕೆಲ್ ಬಿ ಜೋರ್ಡಾನ್ ಅವರು ತಮ್ಮ ವೃತ್ತಿಜೀವನದ ಮೊದಲ ಆಸ್ಕರ್ ಪಡೆದರೆ, ಜೆಸ್ಸಿ ಬಕ್ಲಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದ್ದಾರೆ. ರಯಾನ್ ಕೂಗ್ಲರ್ ನಿರ್ದೇಶನದ 'ಸಿನ್ನರ್ಸ್' (Sinners) ಚಿತ್ರದ ಅಭಿನಯಕ್ಕಾಗಿ ಮೈಕೆಲ್ ಬಿ ಜೋರ್ಡಾನ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 

ಇದು ಅವರ ಮೊದಲ ಆಸ್ಕರ್ ಪ್ರಶಸ್ತಿಯಾಗಿದ್ದು, ವೇದಿಕೆಯ ಮೇಲೆ ಭಾವುಕರಾಗಿ ತಮ್ಮ ಪೋಷಕರು ಮತ್ತು ಸಹ-ಕಲಾವಿದರಿಗೆ ಧನ್ಯವಾದ ಅರ್ಪಿಸಿದರು. ಚಿತ್ರದ ಅದ್ಭುತ ನಟನೆಗಾಗಿ ಜೆಸ್ಸಿ ಬಕ್ಲಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಸಾಧನೆ ಮಾಡಿದ ಮೊದಲ ಐರಿಶ್ ನಟಿ ಎಂಬ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಬ್ರಿಟನ್‌ನಲ್ಲಿ ಅಂದು 'ತಾಯಂದಿರ ದಿನ'ವಾಗಿದ್ದರಿಂದ, ಈ ಪ್ರಶಸ್ತಿಯನ್ನು ಅವರು ಜಗತ್ತಿನ ಎಲ್ಲಾ ತಾಯಂದಿರಿಗೆ ಅರ್ಪಿಸಿದರು.

 ಪಾಲ್ ಥಾಮಸ್ ಆಂಡರ್ಸನ್ ನಿರ್ದೇಶನದ 'ಒನ್ ಬ್ಯಾಟಲ್ ಆಫ್ಟರ್ ಅನದರ್' (One Battle After Another) ಸಿನಿಮಾವು ಅತ್ತ್ಯುತ್ತಮ ಚಿತ್ರ ಸೇರಿದಂತೆ ಒಟ್ಟು 6 ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಅತಿ ದೊಡ್ಡ ವಿಜೇತವಾಗಿ ಹೊರಹೊಮ್ಮಿದೆ..ಭಾರತೀಯ ಮೂಲದ ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಅವರು ಈ ಬಾರಿ ಆಸ್ಕರ್ ವೇದಿಕೆಯಲ್ಲಿ ಮಿಂಚಿದರು. ಅವರು ನಟ ಜೇವಿಯರ್ ಬಾರ್ಡೆಮ್ ಅವರೊಂದಿಗೆ ಸೇರಿ 'ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ಫಿಲ್ಮ್' ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು ವಿಶೇಷವಾಗಿತ್ತು. ಭಾರತೀಯ ಕಾಲಮಾನ ಬೆಳಿಗ್ಗೆ 4:30ಕ್ಕೆ ರೆಡ್ ಕಾರ್ಪೆಟ್ ನೊಂದಿಗೆ ಆರಂಭವಾದ ಈ ಸಮಾರಂಭವು ಚಲನಚಿತ್ರ ರಂಗದ ಗಣ್ಯರ ಸಮಾಗಮಕ್ಕೆ ಸಾಕ್ಷಿಯಾಯಿತು.

Source : Udayavani

25 days ago

Home Flash News