ಭಾರತ ಮತ್ತೊಂದು ಯುದ್ಧಕ್ಕೆ ಸಿದ್ದವಾಗುತ್ತಿದೆ : ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಆರೋಪ
ಭಾರತವು ಮತ್ತೊಂದು ಯುದ್ಧಕ್ಕೆ ಸಿದ್ದವಾಗುತ್ತಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಆರೋಪಿಸಿದ್ದಾರೆ. ಪಾಕಿಸ್ತಾನದ ಪಾರ್ಲಿಮೆಂಟ್ ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುತ್ತಾ, ಭಾರತದ ವಿರುದ್ಧ ಆರೋಪ ಮಾಡಿದ್ದಾರೆ. ಭಾರತ ಸಂಧಾನ ಮಾತುಕತೆಗೆ ಬರಬೇಕೆಂದು ಹೇಳಿದ್ದಾರೆ. ಭಾರತ ಮತ್ತೊಂದು ಯುದ್ಧಕ್ಕೆ ಸಿದ್ದವಾಗುತ್ತಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಆರೋಪಿಸಿದ್ದಾರೆ. ಭಾರತವು ಹಿಂದೆ ಸರಿದು, ಸಂಧಾನದ ಮಾತುಕತೆಗೆ ಬರಬೇಕು ಎಂದು ಆಸೀಫ್ ಅಲಿ ಜರ್ದಾರಿ ಹೇಳಿದ್ದಾರೆ.
ಪಾಕಿಸ್ತಾನದ ಜಂಟಿ ಪಾರ್ಲಿಮೆಂಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಆಸೀಫ್ ಅಲಿ ಜರ್ದಾರಿ, ಭಾರತದ ನಾಯಕರು ಮತ್ತೊಂದು ಯುದ್ದಕ್ಕೆ ಸಿದ್ದವಾಗುತ್ತಿರುವುದಾಗಿ ಹೇಳಿದ್ದಾರೆ. ಜೀವನಪೂರ್ತಿ ಪ್ರಾದೇಶಿಕ ಶಾಂತಿಯ ಪರ ವಕಾಲತ್ತು ವಹಿಸುವವನಾಗಿ, ನಾನು ಇದನ್ನು ಶಿಫಾರಸ್ಸು ಮಾಡಲ್ಲ.
ಪಾಕಿಸ್ತಾನವು ಮಾತುಕತೆಗೆ ಮುಕ್ತ ಮನಸ್ಸು ಹೊಂದಿದೆ.
ಭಾರತಕ್ಕೆ ನನ್ನ ಸಂದೇಶ ಏನೆಂದರೇ, ಯುದ್ಧ ರಂಗಭೂಮಿಯಿಂದ ದೂರ ಸರಿದು, ಅರ್ಥಪೂರ್ಣ ಮಾತುಕತೆಯ ವೇದಿಕೆಗೆ ಬನ್ನಿ. ಏಕೆಂದರೇ, ಪ್ರಾದೇಶಿಕ ಭದ್ರತೆಗೆ ಅದೊಂದೇ ಇರುವ ಮಾರ್ಗ ಎಂದು ಆಸೀಫ್ ಅಲಿ ಜರ್ದಾರಿ ಹೇಳಿದ್ದಾರೆ.
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತ್ತಿನಲ್ಲಿಟ್ಟಿರುವ ಭಾರತದ ತೀರ್ಮಾನವನ್ನು ಟೀಕಿಸಿದ ಆಸೀಫ್ ಅಲಿ ಜರ್ದಾರಿ, ಇದು ಹೈಡ್ರೋ ಟೆರರಿಸಂ ಎಂದು ಕರೆದಿದ್ದಾರೆ. ರಾಜಕೀಯ ಉದ್ದೇಶ ಸಾಧನೆಗೆ ಭಾರತವು ನೀರು ಅನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ ಎಂದಿದ್ದಾರೆ.
ಪಾಕಿಸ್ತಾನವು ಜಮ್ಮು ಕಾಶ್ಮೀರ ಜನರಿಗೆ ರಾಜತಾಂತ್ರಿ, ನೈತಿಕ ಬೆಂಬಲ ನೀಡುವುದನ್ನು ಮುಂದುವರಿಸುತ್ತೆ. ಕಾಶ್ಮೀರ ವಿವಾದ ಬಗೆಹರಿಯುವವರೆಗೂ ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸುವುದು ಮರೀಚಿಕೆ ಎಂದು ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಹೇಳಿದ್ದಾರೆ,
ಇದೇ ವೇಳೆ ಅಪ್ಘಾನಿಸ್ತಾನದಿಂದ ಭಯೋತ್ಪಾದನೆಯ ಬೆದರಿಕೆ ಇದೆ ಎಂದು ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಹೇಳಿದ್ದಾರೆ.